📰 ಆರೋಗ್ಯ ಏರುಪೇರು ಹಿನ್ನೆಲೆ ಶಾಸಕ ಸತೀಶ್‌ ಸೈಲ್‌ಗೆ ಏಳು ದಿನ ಮಧ್ಯಂತರ ಜಾಮೀನು

📰 ಆರೋಗ್ಯ ಏರುಪೇರು ಹಿನ್ನೆಲೆ ಶಾಸಕ ಸತೀಶ್‌ ಸೈಲ್‌ಗೆ ಏಳು ದಿನ ಮಧ್ಯಂತರ ಜಾಮೀನು

ಬೆಂಗಳೂರು: ಹಣ ಅಕ್ರಮ ವರ್ಗಾವಣೆ ಆರೋಪ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ವಶದಲ್ಲಿದ್ದ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಅವರಿಗೆ ಆರೋಗ್ಯ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಏಳು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

2010ರಲ್ಲಿ ಬೇಲೇಕೇರಿ ಬಂದರಿನಲ್ಲಿ ಅಕ್ರಮ ಕಬ್ಬಿಣದ ಅದಿರು ಸಾಗಣೆ ಪ್ರಕರಣದಲ್ಲಿ ಸರಕಾರಕ್ಕೆ 200 ಕೋಟಿ ರೂ.ಗಳಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದ್ದು, ಹಣ ಅಕ್ರಮ ವರ್ಗಾವಣೆಯ ವಿಷಯದಲ್ಲಿ ಇ.ಡಿ ತನಿಖೆ ನಡೆಸುತ್ತಿದೆ. ಈ ಪ್ರಕರಣದ ಭಾಗವಾಗಿ ಸೈಲ್‌ ಮನೆ ಸೇರಿದಂತೆ ಮುಂಬೈ, ದೆಹಲಿ, ಗೋವಾ ಮತ್ತಿತರ ಪ್ರದೇಶಗಳಲ್ಲಿ ದಾಳಿ ನಡೆಸಿದ ವೇಳೆ 1.41 ಕೋಟಿ ರೂ. ನಗದು, 6.75 ಕೆ.ಜಿ. ಚಿನ್ನಾಭರಣ ಹಾಗೂ ವಿವಿಧ ಖಾತೆಗಳಿಂದ ಒಟ್ಟು 14.13 ಕೋಟಿ ರೂ.ಗಳನ್ನು ಇ.ಡಿ ಜಪ್ತಿ ಮಾಡಿತ್ತು.

ಮಂಗಳವಾರ ವಿಚಾರಣೆಗೆ ಹಾಜರಾಗಿದ್ದ ಸೈಲ್‌ ಅವರನ್ನು ಬಂಧಿಸಲಾಗಿತ್ತು. ಆದರೆ ಮಧುಮೇಹ ಮತ್ತು ಉಸಿರಾಟದ ತೊಂದರೆಯಿಂದ ಆರೋಗ್ಯ ಹದಗೆಟ್ಟ ಕಾರಣ ತುರ್ತು ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏಳು ದಿನಗಳ ಮಧ್ಯಂತರ ಜಾಮೀನು ನೀಡಿದೆ.

ಅಪರಾಧ ರಾಜ್ಯ