📰 ಕಾಂತಾರ ಚಾಪ್ಟರ್-1: ರಿಲೀಸ್‌ಗೂ ಮುನ್ನವೇ ₹125 ಕೋಟಿಗೆ ಒಟಿಟಿ ಹಕ್ಕು ಮಾರಾಟ?

📰 ಕಾಂತಾರ ಚಾಪ್ಟರ್-1: ರಿಲೀಸ್‌ಗೂ ಮುನ್ನವೇ ₹125 ಕೋಟಿಗೆ ಒಟಿಟಿ ಹಕ್ಕು ಮಾರಾಟ?

ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ಕಾಂತಾರ ಚಾಪ್ಟರ್-1 ಸಿನಿಮಾ ಅಕ್ಟೋಬರ್ 2 ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಟ್ರೇಲರ್ ಸೆಪ್ಟೆಂಬರ್ 20ರಂದು ಬಿಡುಗಡೆಯಾಗಲಿದೆ. ಈಗಾಗಲೇ ಈ ಚಿತ್ರದ ಒಟಿಟಿ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಖರೀದಿಸಿದ್ದು, ಮೊತ್ತವೇ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಬರೆದಿದೆ.

ವರದಿಗಳ ಪ್ರಕಾರ, ಕಾಂತಾರ ಚಾಪ್ಟರ್-1 ರ ಎಲ್ಲಾ ಭಾಷೆಗಳ ಒಟಿಟಿ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ₹125 ಕೋಟಿ ರೂಪಾಯಿಗಳಿಗೆ ಪಡೆದುಕೊಂಡಿದೆ. ಈ ಮೂಲಕ ಚಿತ್ರದ ಸಂಪೂರ್ಣ ಬಜೆಟ್ ಬಿಡುಗಡೆಯಾಗುವ ಮೊದಲುಲೇ ವಾಪಸ್‌ ಆಗಿದೆ. ಕೆಜಿಎಫ್-2 ನಂತರ ಇಷ್ಟು ಭಾರಿ ಮೊತ್ತಕ್ಕೆ ಒಟಿಟಿ ಹಕ್ಕು ಮಾರಾಟವಾದುದು ಇದೇ ಮೊದಲ ಬಾರಿ.

ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ವಿಜಯ್ ಕಿರಗಂದೂರು ಮತ್ತು ಚಲುವೆ ಗೌಡ ನಿರ್ಮಿಸಿರುವ ಈ ಚಿತ್ರಕ್ಕೆ ವಿಶ್ವದ 20ಕ್ಕೂ ಹೆಚ್ಚು ವಿಎಫ್‌ಎಕ್ಸ್ ಸ್ಟುಡಿಯೋಗಳಲ್ಲಿ ಭರ್ಜರಿ ತಂತ್ರಜ್ಞಾನಿ ಕೆಲಸಗಳು ನಡೆಯುತ್ತಿವೆ.

2022ರಲ್ಲಿ ಬಿಡುಗಡೆಯಾಗಿ ವಿಶ್ವಾದ್ಯಂತ 400 ಕೋಟಿ ಗಳಿಸಿದ ಕಾಂತಾರ ಚಿತ್ರದ ಪ್ರೀಕ್ವೆಲ್ ಆಗಿರುವ ಈ ಚಿತ್ರ ಈಗಾಗಲೇ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. 🎬

ಮನೋರಂಜನೆ ರಾಷ್ಟ್ರೀಯ