ಫ್ರಾನ್ಸ್‌ನಲ್ಲಿ ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಗಳು ಇದೀಗ ಹಿಂಸಾಚಾರಕ್ಕೆ ತಿರುಗಿವೆ. ಜನರ ಅಸಮಾಧಾನ ಸ್ಫೋಟಗೊಂಡು, ಹಲವೆಡೆ ರಸ್ತೆಗಳು ತಡೆದು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಈ ನಡುವೆ, ಜನರ ಆಕ್ರೋಶದ ತೀವ್ರತೆಯಿಂದಾಗಿ ಈಗಾಗಲೇ ಇಬ್ಬರು ಪ್ರಧಾನ ಮಂತ್ರಿಗಳು ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರತಿಭಟನಾಕಾರರು ಇದೀಗ ರಾಷ್ಟ್ರಪತಿ ಎಮ್ಮಾನುಯೆಲ್ ಮ್ಯಾಕ್ರೊನ್ ಅವರ ರಾಜೀನಾಮೆಯನ್ನೇ ಆಗ್ರಹಿಸುತ್ತಿದ್ದಾರೆ.
ರಾಜಕೀಯ ಅಸ್ಥಿರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಫ್ರಾನ್ಸ್ ದೇಶವು ಗಂಭೀರ ಸಂಕಷ್ಟವನ್ನು ಎದುರಿಸುತ್ತಿದೆ ಎಂದು ಅಂತರರಾಷ್ಟ್ರೀಯ ವಲಯಗಳು ವಿಶ್ಲೇಷಿಸಿವೆ.

