ಇಂದು ನಡೆದ ಏಷ್ಯಾ ಕಪ್ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ತಂಡ ಕೊರಿಯಾವನ್ನು 4-1 ಅಂತರದಿಂದ ಸೋಲಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಇದರೊಂದಿಗೆ ಮುಂದಿನ ವರ್ಷದ ವಿಶ್ವಕಪ್‌ಗೆ ನೇರ ಪ್ರವೇಶವನ್ನು ಭಾರತ ಪಕ್ಕಾ ಮಾಡಿಕೊಂಡಿದೆ.




ಆರಂಭದಿಂದಲೇ ಆಕ್ರಮಣ ಶೈಲಿಯಲ್ಲಿ ಆಟವಾಡಿದ ಭಾರತ, ಮೊದಲ ಅರ್ಧದಲ್ಲಿ ಸುಖ್‌ಜೀತ್ ಸಿಂಗ್ ಹಾಗೂ ದಿಲ್ಪ್ರೀತ್ ಸಿಂಗ್ ಅವರ ಗೋಲುಗಳಿಂದ 2-0 ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ದಿಲ್ಪ್ರೀತ್ ಮತ್ತೊಂದು ಗೋಲ್ ಹೊಡೆದು ಅಂತರ ಹೆಚ್ಚಿಸಿದರು. ಅಂತಿಮವಾಗಿ ಅಮಿತ್ ರೋಹಿದಾಸ್ ತಮ್ಮ ಗೋಲಿನಿಂದ ಜಯಕ್ಕೆ ಮೆರಗು ನೀಡಿದರು.
ಇದಕ್ಕೂ ಮುನ್ನ ಸೂಪರ್ 4 ಹಂತದಲ್ಲಿ ಭಾರತ ಹಾಗೂ ಕೊರಿಯಾ ತಂಡಗಳು 2-2 ಡ್ರಾ ಆಡಿದ್ದವು. ಆದರೆ ಫೈನಲ್‌ನಲ್ಲಿ ಭಾರತ ಪ್ರಥಮ ನಿಮಿಷದಲ್ಲೇ ಸುಖ್‌ಜೀತ್ ಅವರ ಅದ್ಭುತ ಗೋಲಿನಿಂದ ಮುನ್ನಡೆ ಸಾಧಿಸಿ ಜಯದ ಹಾದಿ ಹಿಡಿದಿತು.

