ಆಹಾರ ಮತ್ತು ದಿನಸಿ ವಿತರಣೆ ದರಗಳು ಇನ್ನುಮುಂದೆ ಹೆಚ್ಚಾಗುವ ಸಾಧ್ಯತೆಗಳಿವೆ. ಕೇಂದ್ರ ಸರ್ಕಾರವು ಆಹಾರ ವಿತರಣೆ ಹಾಗೂ ಕ್ವಿಕ್ ಕಾಮರ್ಸ್ ಸಂಸ್ಥೆಗಳ ಡೆಲಿವರಿ ಶುಲ್ಕದ ಮೇಲೆ 18% ಜಿಎಸ್ಟಿ ವಿಧಿಸಲು ನಿರ್ಧರಿಸಿರುವುದರಿಂದ ವಿತರಣಾ ಶುಲ್ಕ ಹೆಚ್ಚಳವಾಗುವ ಸಾಧ್ಯತೆ ಇದೆ.

ಇದರಿಂದ ಸ್ವಿಗ್ಗಿ, ಝೊಮ್ಯಾಟೊ, ಬ್ಲಿಂಕಿಟ್ ಮುಂತಾದ ಸೇವೆಗಳ ಮೂಲಕ ಆಹಾರ ಮತ್ತು ದಿನಸಿ ಸಾಮಾನುಗಳನ್ನು ಆರ್ಡರ್ ಮಾಡುವ ಗ್ರಾಹಕರ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ.
ತಜ್ಞರ ಅಭಿಪ್ರಾಯದ ಪ್ರಕಾರ, ಈ ನಿರ್ಧಾರವು ಸಾಮಾನ್ಯ ಗ್ರಾಹಕರ ಖರ್ಚು ಸಾಮರ್ಥ್ಯಕ್ಕೆ ಹೊಡೆತ ನೀಡಬಹುದಾಗಿದೆ ಹಾಗೂ ಅವರ ಆರ್ಡರ್ ಮಾಡುವ ಪದ್ಧತಿಯಲ್ಲಿ ಬದಲಾವಣೆ ತರಬಹುದಾಗಿದೆ.
ಮುಂದಿನ ದಿನಗಳಲ್ಲಿ ಆನ್ಲೈನ್ ಆಹಾರ ಮತ್ತು ದಿನಸಿ ಆರ್ಡರ್ಗಳಿಗೆ ಹೆಚ್ಚುವರಿ ಮೊತ್ತವನ್ನು ನೀಡಲು ಗ್ರಾಹಕರು ಸಿದ್ಧರಾಗಬೇಕಾಗುತ್ತದೆ.

