ಲಡಾಖ್‌ನ ಕಾಂಗ್‌ಮಾರು ಲಾ ಪಾಸ್‌ನಲ್ಲಿ 17,000 ಅಡಿ ಎತ್ತರದಲ್ಲಿ ಸಿಲುಕಿದ್ದ ದಕ್ಷಿಣ ಕೊರಿಯಾದ ಇಬ್ಬರು ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಿಸಿದೆ. ಸೆಪ್ಟೆಂಬರ್ 4ರ ರಾತ್ರಿ ನಡೆದ ಈ ಸಾಹಸಮಯ ಕಾರ್ಯಾಚರಣೆಯಲ್ಲಿ, ಸೇನೆಯ ವಿಮಾನಯಾನ ದಳ ತುರ್ತು ಕರೆ ಸ್ವೀಕರಿಸಿ ಕೇವಲ 15 ನಿಮಿಷಗಳಲ್ಲಿ ಹೆಲಿಕಾಪ್ಟರ್ ದಳವನ್ನು ಸಜ್ಜುಗೊಳಿಸಿತು.

ರಾತ್ರಿ 8:05ಕ್ಕೆ ಕರೆ ಬಂದ ತಕ್ಷಣ, ಸೇನೆಯ ಪೈಲಟ್‌ಗಳು ನೈಟ್ ವೀಜನ‍್ ಗಾಗಲ್ಸ್‌ಗಳ ಸಹಾಯದಿಂದ ಹಿಮಗಡ್ಡೆ ಕಹಿಮಗಾಳಿ, ಶೂನ್ಯಕ್ಕೆ ಸಮಾನ ದೃಶ್ಯಮಾನತೆ ನಡುವೆ 9:15ಕ್ಕೆ ಯಶಸ್ವಿಯಾಗಿ ಇಳಿಯುವಲ್ಲಿ ಯಶಸ್ವಿಯಾದರು. ಹ್ಯುನ್ ವೂ ಕಿಮ್ ಮತ್ತು ಅವರ ಪತ್ನಿ ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ವೈದ್ಯಕೀಯ ತಂಡದವರಿಗೆ ಹಸ್ತಾಂತರಿಸಲಾಯಿತು.
ಅಧಿಕಾರಿಗಳು ಈ ಮಿಷನ್‌ನ್ನು ಹೊಗಳಿದ್ದು, ಸೇನೆಯ ತರಬೇತಿ, ಹೊಂದಾಣಿಕೆ ಮತ್ತು ಎತ್ತರ ಪ್ರದೇಶದ ಕಾರ್ಯಚರಣೆ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ಶ್ಲಾಘಿಸಿದರು.
ಈ ರಕ್ಷಣಾ ಕಾರ್ಯಾಚರಣೆ ಭಾರತದ ಮಾನವೀಯ ಬದ್ಧತೆಯನ್ನು ತೋರಿಸಿದ್ದು, ದೇಶೀಯರು ಮಾತ್ರವಲ್ಲದೆ ವಿದೇಶಿ ನಾಗರಿಕರಿಗೂ ಸಹಾಯ ಮಾಡುವ ನಿಲುವನ್ನು ಪ್ರತಿಬಿಂಬಿಸಿದೆ. ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಪ್ರವಾಹ ಹಾವಳಿ ಮುಂದುವರಿದಿರುವುದರಿಂದ, ಸೇನೆ ನಿರಂತರವಾಗಿ ಆಹಾರ, ವೈದ್ಯಕೀಯ ನೆರವು ಒದಗಿಸಿ, ತುರ್ತು ಪರಿಸ್ಥಿತಿಯಲ್ಲಿರುವವರನ್ನು ಸ್ಥಳಾಂತರಿಸುತ್ತಿದೆ.

