ನವದೆಹಲಿ: ಭಾರತ ಮತ್ತು ಅಮೆರಿಕಾ ನಡುವೆ ಅತ್ಯಂತ ಸಕಾರಾತ್ಮಕ ಹಾಗೂ ಭವಿಷ್ಯೋನ್ಮುಖ ಸಮಗ್ರ ಮತ್ತು ಜಾಗತಿಕ ವ್ಯೂಹಾತ್ಮಕ ಸಹಭಾಗಿತ್ವವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಮೆರಿಕಾ ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮೋದಿ ಅವರು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾ, “ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ ಭಾವನೆಗಳು ಮತ್ತು ಭಾರತ–ಅಮೆರಿಕಾ ಸಂಬಂಧಗಳ ಕುರಿತು ನೀಡಿದ ಸಕಾರಾತ್ಮಕ ಅಭಿಪ್ರಾಯವನ್ನು ನಾನು ಮೆಚ್ಚುತ್ತೇನೆ” ಎಂದು ತಿಳಿಸಿದ್ದಾರೆ.

ವಾಷಿಂಗ್ಟನ್‌ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರು, ಭಾರತ ಮತ್ತು ಅಮೆರಿಕಾ ನಡುವಿನ ಸಂಬಂಧ ವಿಶೇಷವಾಗಿದ್ದು, ಅದರಲ್ಲಿ ಯಾವುದೇ ಆತಂಕವಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು “ಒಳ್ಳೆಯ ಪ್ರಧಾನಮಂತ್ರಿ” ಎಂದು ಹೊಗಳಿದ ಅವರು, “ನಾವು ಸ್ನೇಹಿತರಾಗಿರುತ್ತೇವೆ” ಎಂದು ಹೇಳಿದ್ದಾರೆ.

