ಎಲನ್ ಮಸ್ಕ್ ಅವರ ಮೆದುಳಿನ ಚಿಪ್ ಇಂಪ್ಲಾಂಟ್ ಕಂಪನಿ ನ್ಯೂರಾಲಿಂಕ್ ಕೆನಡಾದಲ್ಲಿ ಇತಿಹಾಸ ನಿರ್ಮಿಸಿದೆ. ಅಮೆರಿಕ ಹೊರತುಪಡಿಸಿ ಮೊದಲ ಬಾರಿಗೆ ಎರಡು ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ಕೆನಡಾದಲ್ಲಿ ನೆರವೇರಿಸಿದ್ದು, ಇದು ವಿಶ್ವದಾದ್ಯಂತ ಹೆಚ್ಚಿನ ಜನರಿಗೆ ತಂತ್ರಜ್ಞಾನ ತಲುಪುವ ಪ್ರಮುಖ ಹೆಜ್ಜೆಯಾಗಿದೆ.

ನ್ಯೂರಾಲಿಂಕ್ ತನ್ನ ವ್ಯಾಪ್ತಿಯನ್ನು ಈಗ ಕೆನಡಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರಗಳಿಗೆ ವಿಸ್ತರಿಸಿರುವುದಾಗಿ ಪ್ರಕಟಿಸಿದೆ. ಸಹ-ಸ್ಥಾಪಕ ಡಾಂಗ್ಜಿನ್ ‘DJ’ ಸಿಯೋ ಅವರು 3.5 ವಾರಗಳಲ್ಲಿ 3 ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ. ಎಲನ್ ಮಸ್ಕ್ ತಂಡದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಶೀಘ್ರದಲ್ಲೇ ಸಂಪೂರ್ಣ ಕುರುಡಾದವರಿಗೆ ಸೀಮಿತ ಮಟ್ಟದ ದೃಷ್ಟಿ ಹಿಂತಿರುಗಿಸುವ ಗುರಿ ಹೊಂದಿದ್ದೇವೆ ಎಂದು ಘೋಷಿಸಿದರು.

