ಕನ್ನಡದ ಪ್ರತಿಭಾವಂತ ನಟ ಭುವನ್ ಪೊನ್ನಣ್ಣ ಮರು ಪ್ರವೇಶದ ಸಿದ್ಧತೆಯಲ್ಲಿದ್ದಾರೆ. ಮದುವೆ ಹಾಗೂ ಕುಟುಂಬ ಜೀವನಕ್ಕೆ ಆದ್ಯತೆ ನೀಡಿ ಸ್ವಲ್ಪ ಕಾಲ ಸಿನಿಮಾರಂಗದಿಂದ ದೂರ ಉಳಿದಿದ್ದ ಭುವನ್, ಈಗ ಮತ್ತೆ ಅದ್ಧೂರಿ ರೀ ಎಂಟ್ರಿ ಮಾಡುತ್ತಿದ್ದಾರೆ.

ಯೋಗರಾಜ್ ಭಟ್ ನಿರ್ದೇಶನದ ‘ಹಲೋ 123’ ಚಿತ್ರದಲ್ಲಿ ಭುವನ್ ಪೊನ್ನಣ್ಣ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಗೀತವನ್ನು ವಿ. ಹರಿಕೃಷ್ಣ ಸಂಯೋಜಿಸುತ್ತಿದ್ದು, ಭುವನ್-ಭಟ್-ಹರಿಕೃಷ್ಣರ ಕಾಂಬೋಗೆ ಈಗಾಗಲೇ ಹೆಚ್ಚಿನ ನಿರೀಕ್ಷೆ ಮೂಡಿದೆ.

ಚಿತ್ರದ ನಿರ್ಮಾಣವನ್ನು ವಿಜಯ್ ಟಾಟಾ ಹಾಗೂ ಅಮ್ರಿತಾ ವಿಜಯ್ ಟಾಟಾ ಕೈಗೆತ್ತಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಸ್ಕ್ರಿಪ್ಟ್ ಪೂಜೆ ಹಾಗೂ ಶೀರ್ಷಿಕೆ ಅನಾವರಣ ನೆರವೇರಿದ್ದು, ಭುವನ್-ಹರ್ಷಿಕಾ ದಂಪತಿಯ ಪುತ್ರಿ ತ್ರಿದೇವಿಯವರ ಕೈಯಿಂದ ಸಿನಿಮಾಗೆ ಮುಹೂರ್ತ ನೆರವೇರಿದೆ.
ಅಕ್ಟೋಬರ್‌ನಲ್ಲಿ ಶೂಟಿಂಗ್ ಆರಂಭಿಸಿ, ಮುಂದಿನ ವರ್ಷದ ಮಾರ್ಚ್ ವೇಳೆಗೆ ಚಿತ್ರ ಬಿಡುಗಡೆಯ ಪ್ಲಾನ್ ಇದೆ. ನಿರ್ದೇಶನದ ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿರುವ ಯೋಗರಾಜ್ ಭಟ್, ಈ ಚಿತ್ರವನ್ನು ವಿಶಿಷ್ಟ ರೀತಿಯಲ್ಲಿ ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದ್ದಾರೆ.

