ದೆಹಲಿ: ನಿರಂತರ ಮಳೆಯಿಂದಾಗಿ ಯಮುನಾ ನದಿ ನೀರಿನ ಮಟ್ಟವು ಅಪಾಯದ ಮಿತಿಯನ್ನು ದಾಟಿದೆ. ಹೀಗಾಗಿ ನದಿ ತೀರದ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಭಾರಿ ಮಳೆಯಿಂದಾಗಿ ನದಿಯ ಪ್ರವಾಹ ತೀವ್ರಗೊಂಡಿದ್ದು, ಸಮೀಪದ ಕಾಲೊನಿ ಹಾಗೂ ಗ್ರಾಮಗಳು ಜಲಾವೃತಗೊಳ್ಳುವ ಆತಂಕ ವ್ಯಕ್ತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಆಡಳಿತವು ಎನ್ಡಿಆರ್ಎಫ್ ಹಾಗೂ ಸ್ಥಳೀಯ ದಳದ ಸಹಾಯದಿಂದ ಸ್ಥಳಾಂತರ ಕಾರ್ಯಾಚರಣೆ ಕೈಗೊಂಡಿದೆ.
ಆಡಳಿತವು ನಾಗರಿಕರಿಗೆ ನದಿಯ ತೀರ ಪ್ರದೇಶಗಳಿಗೆ ಹೋಗಬಾರದು ಎಂದು ಎಚ್ಚರಿಕೆ ನೀಡಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ, ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆ ಮುಂದುವರಿದರೆ ಪ್ರವಾಹದ ಭೀತಿ ಹೆಚ್ಚುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

