ಧರ್ಮಸ್ಥಳ ಪ್ರಕರಣ: ಎಂಟು ಸ್ವಾಮೀಜಿಗಳ ನಿಯೋಗ ಅಮಿತ್ ಶಾ ಭೇಟಿಯಾಗಿ ಎನ್‌ಐಎ ತನಿಖೆ ಆಗ್ರಹ

ಧರ್ಮಸ್ಥಳ ಪ್ರಕರಣ: ಎಂಟು ಸ್ವಾಮೀಜಿಗಳ ನಿಯೋಗ ಅಮಿತ್ ಶಾ ಭೇಟಿಯಾಗಿ ಎನ್‌ಐಎ ತನಿಖೆ ಆಗ್ರಹ

ದೆಹಲಿ: ಧರ್ಮಸ್ಥಳ ಪ್ರಕರಣ (Dharmasthala Case) ಕುರಿತು ಕರ್ನಾಟಕದ ವಿವಿಧ ಮಠಾಧೀಶರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ನಿಯೋಗದಲ್ಲಿ ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸೇರಿದಂತೆ ಎಂಟು ಸ್ವಾಮೀಜಿಗಳು ಭಾಗವಹಿಸಿದ್ದರು.

ಸ್ವಾಮೀಜಿಗಳು, “ಹಿಂದೂಗಳು, ಹಿಂದೂ ಧಾರ್ಮಿಕ ಕೇಂದ್ರಗಳು ಹಾಗೂ ಹಿಂದೂ ಮಠಾಧೀಶರ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಆರು ತಿಂಗಳ ಅವಧಿಯೊಳಗೆ ಹಲವಾರು ದಾಳಿಗಳು ನಡೆದಿವೆ. ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದೆ. ಹೀಗಾಗಿ ಕೇಂದ್ರ ತನಿಖಾ ಸಂಸ್ಥೆಯ ಮೂಲಕ ಸೂಕ್ತ ತನಿಖೆ ನಡೆಯಬೇಕು” ಎಂದು ಆಗ್ರಹಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಅಮಿತ್ ಶಾ,
“ಧರ್ಮಸ್ಥಳ ಪ್ರಕರಣದ ಬೆಳವಣಿಗೆಗಳನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಈ ವಿಷಯವನ್ನು ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಲಾಗುವುದು. ಸಭೆಯ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದರು.

👉 ಧರ್ಮಸ್ಥಳ ಪ್ರಕರಣ ಈಗಾಗಲೇ ರಾಜ್ಯದಲ್ಲಿ ರಾಜಕೀಯ ಮತ್ತು ಧಾರ್ಮಿಕ ವಲಯಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಅಪರಾಧ ಧಾರ್ಮಿಕ