ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿಶಿಷ್ಟ ಪೋಸ್ಟರ್‌ಗಳ ಮೂಲಕ ಪ್ರಸಿದ್ಧಿ ಪಡೆದಿರುವ ಮಹೇಶ್ ನಾಯಕ್, ನಿರೂಪಕಿ ಅನುಶ್ರೀ ಮದುವೆ ಕುರಿತು ಕೂಡ ವಿಶೇಷ ರೀತಿಯ ಪೋಸ್ಟರ್ ಸಿದ್ಧಪಡಿಸಿ ವಿಡಿಯೋ ರೂಪದಲ್ಲಿ ಇನ್ಸ್ಟಾಗ್ರಾಂಗೆ ಅಪ್ಲೋಡ್ ಮಾಡಿದ್ದಾರೆ.

ಅವರ ಪೋಸ್ಟರ್‌ನಲ್ಲಿ “ಸರಿಯಾದ ವ್ಯಕ್ತಿ ಯಾವಾಗಲೂ ಜೀವನದಲ್ಲಿ ತಡವಾಗಿ ಸಿಗುತ್ತಾರೆ” ಎಂದು ಬರೆಯಲಾಗಿದ್ದು, ಜೊತೆಗೆ ಅನುಶ್ರೀ ಮತ್ತು ರೋಶನ್ ಅವರ ಮದುವೆಯ ಫೋಟೋವನ್ನು ಕೂಡ ಸೇರಿಸಲಾಗಿದೆ.
ಈ ಹಾರೈಕೆಗೆ ಪ್ರತಿಕ್ರಿಯೆ ನೀಡಿದ ಅನುಶ್ರೀ, “ಬರೀನೆಗೆಟಿವ್ ಕಾಮೆಂಟ್‌ಗಳ ಯುಗದಲ್ಲಿ ಹೃದಯದಿಂದ ಇಷ್ಟು ಸುಂದರವಾಗಿ ಹಾರೈಸಿದಕ್ಕೆ ಧನ್ಯವಾದಗಳು. ನಿಮ್ಮಂತವರು ಇನ್ನಷ್ಟು ಜನ ಬೇಕಾಗಿದ್ದಾರೆ” ಎಂದು ತಿಳಿಸಿದ್ದಾರೆ.


👉 ಈ ಮೂಲಕ ಅನುಶ್ರೀ, ನಕಾರಾತ್ಮಕ ಟೀಕೆಗಳ ನಡುವೆ ಸಕಾರಾತ್ಮಕ ಹಾರೈಕೆಯನ್ನು ಕೃತಜ್ಞತೆಯಿಂದ ಸ್ವೀಕರಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

