ಅರಮನೆ ಮೈದಾನದಲ್ಲಿ ಬೃಹತ್ ಮುಸ್ಲಿಂ ಸಮಾವೇಶ – 1500ನೇ ಪ್ರವಾದಿ ದಿನಾಚರಣೆ, ವಿದೇಶಿ ಧಾರ್ಮಿಕ ನಾಯಕರ ಭಾಗವಹಿಸುವಿಕೆ ಬಗ್ಗೆ ವಿವಾದ

ಅರಮನೆ ಮೈದಾನದಲ್ಲಿ ಬೃಹತ್ ಮುಸ್ಲಿಂ ಸಮಾವೇಶ – 1500ನೇ ಪ್ರವಾದಿ ದಿನಾಚರಣೆ, ವಿದೇಶಿ ಧಾರ್ಮಿಕ ನಾಯಕರ ಭಾಗವಹಿಸುವಿಕೆ ಬಗ್ಗೆ ವಿವಾದ

ಬೆಂಗಳೂರು: ಸೆಪ್ಟೆಂಬರ್ 5ರಂದು ನಡೆಯಲಿರುವ ಈದ್ ಮಿಲಾದ್ ಅಂಗವಾಗಿ ಈ ಬಾರಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಹಮ್ಮದ್ ಪೈಗಂಬರರ ಹುಟ್ಟುಹಬ್ಬವನ್ನು ಪ್ರತಿವರ್ಷ ಈದ್ ಮಿಲಾದ್ ಹೆಸರಿನಲ್ಲಿ ಆಚರಿಸಲಾಗುತ್ತದೆ. ಆದರೆ ಈ ಬಾರಿ 1500ನೇ ಪ್ರವಾದಿ ದಿನಾಚರಣೆ ಹೆಸರಿನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭವ್ಯ ಸಮಾವೇಶ ನಡೆಯಲಿದೆ.

ಮಿಲಾದ್-ಉನ್-ನಬಿ ಅಂತರಾಷ್ಟ್ರೀಯ ಮುಸ್ಲಿಂ ಸಮಾವೇಶದಲ್ಲಿ ದೇಶ-ವಿದೇಶದ ಹಲವು ಧಾರ್ಮಿಕ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ಭಾರತದ ಗ್ರ್ಯಾಂಡ್ ಮುಫ್ತಿ ಶೇಖ್ ಅಬುಬಕರ್ ಅಹ್ಮದ್ ಮುಸ್ಲಿಯಾರ್, ಯೆಮೆನ್‌ನ ಸೂಫಿ ಸಂತ ಹಬೀಬ್ ಉಮರ್ ಬಿನ್ ಹಫೀಜ್, ಜೊತೆಗೆ ಸೌದಿ ಅರೇಬಿಯಾದಿಂದ ಬಂದಿರುವ ಧಾರ್ಮಿಕ ನಾಯಕರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ಆಲ್ ಕರ್ನಾಟಕ ಸುನ್ನಿ ಜಮ್ಮೀತ್ ಉಲ್ ಉಲಮಾ ಸಮಿತಿ ಈ ಸಮಾವೇಶವನ್ನು ಆಯೋಜಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವ ಜಮೀರ್ ಅಹಮ್ಮದ್ ಸೇರಿದಂತೆ ಸರ್ಕಾರದ ಅನೇಕ ಗಣ್ಯರಿಗೆ ಆಹ್ವಾನ ನೀಡಲಾಗಿದೆ.

ಆದರೆ, ವಿದೇಶಗಳಿಂದ ಬಂದಿರುವ ಧಾರ್ಮಿಕ ನಾಯಕರಲ್ಲಿ ಕೆಲವರು ‘ಪ್ರವಾಸಿ ವೀಸಾ’ ಮೇಲೆ ಭಾರತಕ್ಕೆ ಆಗಮಿಸಿ, ಧರ್ಮಪ್ರಚಾರದಲ್ಲಿ ತೊಡಗಿದ್ದಾರೆ ಎಂಬ ಆರೋಪವನ್ನು ಬಿಜೆಪಿ ಮತ್ತು ಹಿಂದು ಸಂಘಟನೆಗಳು ಮುಂದಿರಿಸಿದ್ದವೆ. ವೀಸಾ ನಿಯಮ ಉಲ್ಲಂಘನೆ ನಡೆದಿದೆ ಎಂಬ ಪ್ರಶ್ನೆ ಎದ್ದಿದ್ದು, ಇದರಿಂದ ಸಮಾವೇಶಕ್ಕೆ ರಾಜಕೀಯ ಬಣ್ಣ ಸೇರ್ಪಡೆಯಾಗಿದೆ.

ಅಂತರಾಷ್ಟ್ರೀಯ ಧಾರ್ಮಿಕ ರಾಜ್ಯ