ಆರ್‌ಸಿಬಿ ವಿಜಯೋತ್ಸವದ ದುರಂತ – ವಿರಾಟ್ ಕೊಹ್ಲಿ ಭಾವುಕ ಪ್ರತಿಕ್ರಿಯೆ

ಆರ್‌ಸಿಬಿ ವಿಜಯೋತ್ಸವದ ದುರಂತ – ವಿರಾಟ್ ಕೊಹ್ಲಿ ಭಾವುಕ ಪ್ರತಿಕ್ರಿಯೆ

ಬೆಂಗಳೂರು: ಮೂರು ತಿಂಗಳು ಕಳೆದರೂ ಜೂನ್ 4ರಂದು ಆರ್‌ಸಿಬಿ ಐಪಿಎಲ್ ಪ್ರಶಸ್ತಿ ಜಯೋತ್ಸವದ ನಂತರ ಸಂಭವಿಸಿದ ದುರಂತವನ್ನು ಮರೆತಿಲ್ಲ. ತಂಡದ ಐತಿಹಾಸಿಕ ಸಾಧನೆಯನ್ನು ಸಂಭ್ರಮಿಸಲು ನಡೆದ ವಿಜಯೋತ್ಸವ, ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ಭೀಕರ ದುರಂತಕ್ಕೆ ಕಾರಣವಾಯಿತು. ಅಭಿಮಾನಿಗಳ ಗುಂಪಿನಲ್ಲಿ ಉಂಟಾದ ತುಳಿಕೆ ವೇಳೆ 11 ಮಂದಿ ಜೀವ ಕಳೆದುಕೊಂಡರೆ, 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಈ ಘಟನೆ ಆರ್‌ಸಿಬಿಯ ದೀರ್ಘಕಾಲದ ನಿರೀಕ್ಷಿತ ಜಯದ ಸಂಭ್ರಮವನ್ನು ಶಾಶ್ವತವಾದ ದುಃಖದ ನೆನಪಿನಂತೆ ಉಳಿಸಿದೆ.

ಇದೀಗ ಆರ್‌ಸಿಬಿ ತಾರೆ ವಿರಾಟ್ ಕೊಹ್ಲಿ ಭಾವುಕರಾದ ಸಂದೇಶವನ್ನು ಆರ್‌ಸಿಬಿ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
“ಜೀವನದಲ್ಲಿ ಜೂನ್ 4ರಂತಹ ಘಟನೆಗೆ ಯಾರೂ ಸಿದ್ಧರಾಗಿರಲು ಸಾಧ್ಯವಿಲ್ಲ. ನಮ್ಮ ಫ್ರಾಂಚೈಸಿ ಇತಿಹಾಸದಲ್ಲಿ ಅತ್ಯಂತ ಸಂತೋಷದ ಕ್ಷಣವಾಗಬೇಕಿದ್ದದ್ದು ದುರಂತಕ್ಕೆ ತಿರುಗಿಬಿಟ್ಟಿದೆ. ನಾವು ಕಳೆದುಕೊಂಡ ಕುಟುಂಬಗಳಿಗಾಗಿ, ಗಾಯಗೊಂಡ ಅಭಿಮಾನಿಗಳಿಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆ. ನಿಮ್ಮ ನಷ್ಟವು ಈಗ ನಮ್ಮ ಕಥೆಯ ಭಾಗವಾಗಿದೆ. ಒಟ್ಟಾಗಿ ನಾವು ಕಾಳಜಿ, ಗೌರವ ಮತ್ತು ಜವಾಬ್ದಾರಿಯುತವಾಗಿ ಮುಂದುವರೆಯುತ್ತೇವೆ.”

ಕೊಹ್ಲಿಯ ಮಾತುಗಳಿಗೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾದರೂ, ಕೆಲ ಅಭಿಮಾನಿಗಳು ಅವರ ಪ್ರತಿಕ್ರಿಯೆ ತಡವಾಗಿದೆ ಎಂಬ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದುರಂತದ ನಂತರ ಭಾರತದಲ್ಲಿರಲಿಲ್ಲ ಎಂಬ ಕಾರಣಕ್ಕೂ ವಿರಾಟ್ ವಿರುದ್ದ ಟೀಕೆಗಳು ಕೇಳಿಬಂದಿವೆ.

ಈ ದುರಂತದಿಂದ ಪಾಠಗಳನ್ನು ಕಲಿತು ಮುಂದಿನ ಸಂಭ್ರಮಾಚರಣೆಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಆರ್‌ಸಿಬಿಯ ಮುಂದಿರುವ ದೊಡ್ಡ ಹೊಣೆಗಾರಿಕೆಯಾಗಿದೆ.

ಕ್ರೀಡೆ