ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಹೊಸ ತಿರುವು ಕಂಡು ಬಂದಿದೆ. ಪ್ರಕರಣವನ್ನು ಪುನಃ ತೆರೆಯುವ ಪ್ರಕ್ರಿಯೆಯ ಮುನ್ಸೂಚನೆ ಕಾಣುತ್ತಿದೆ, ವಿಶೇಷ ತನಿಖಾ ತಂಡ (SIT) ಧರ್ಮಸ್ಥಳದ ಉದಯ್ ಕುಮಾರ್ ಜೈನ್ ವಿಚಾರಣೆಗೆ ಕರೆದಿದ್ದಾರೆ.ಅದರಂತೆ ಇಂದು ಅವರು ಎಸ್ಐಟಿ ಕಚೇರಿಗೆ ಆಗಮಿಸಿದ್ದಾರೆ. ಇನ್ನು ಉಳಿದ ಇಬ್ಬರು ಆರೋಪಿತ ವ್ಯಕ್ತಿಗಳು ಧೀರಜ್ ಕೆಲ್ಲ ಮತ್ತು ಮಲ್ಲಿಕ್ ಜೈನ್ ಕೂಡ ವಿಚಾರಣೆ ಎದುರಿಸುವ ಸಾದ್ಯತೆ ಇದೆ.

2012ರಲ್ಲಿ ನಡೆದ ಸೌಜನ್ಯ ಪ್ರಕರಣದಲ್ಲಿ ಆರೋಪಿಗಳಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಭಕ್ತರು ಮತ್ತು ಕುಟುಂಬಸ್ಥರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಈಗ SIT ನ ಹೊಸ ಕ್ರಮ ಪ್ರಕರಣ ಪುನಃ ಪರಿಶೀಲನೆಗೆ ದಾರಿ ಮಾಡಿಕೊಟ್ಟಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಳೆದ ದಶಕದಲ್ಲಿ ಪ್ರಕರಣದ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆ ಹಲವು ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಸೌಜನ್ಯದ ಕುಟುಂಬ ನ್ಯಾಯಕ್ಕಾಗಿ ಧಾವಿಸುತ್ತಿರುವ ಸಂದರ್ಭದಲ್ಲಿ SIT ನ ಈ ಕ್ರಮದಿಂದ ಪ್ರಕರಣಕ್ಕೆ ಹೊಸ ಬೆಳಕು ಬೀಳುವ ನಿರೀಕ್ಷೆ ವ್ಯಕ್ತವಾಗಿದೆ.
👉 ಸೌಜನ್ಯ ಪ್ರಕರಣದ ಪುನರ್ ತನಿಖೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಪಷ್ಟತೆ ಬರುವ ಸಾಧ್ಯತೆಯಿದೆ.

