ಬೆಂಗಳೂರು: ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ವಿರುದ್ಧ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (DRI) ದೊಡ್ಡ ಕ್ರಮ ಕೈಗೊಂಡಿದೆ. 127 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿದ ಪ್ರಕರಣದಲ್ಲಿ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ, ಡಿಆರ್ಐ ನಟಿಗೆ ಬರೋಬ್ಬರಿ ₹102 ಕೋಟಿ ರೂ. ದಂಡ ವಿಧಿಸಿದೆ.

ಅಕ್ರಮ ಚಿನ್ನ ಸಾಗಾಟ ಜಾಲದ ತನಿಖೆಯಲ್ಲಿ ರನ್ಯಾ ರಾವ್ ಹೆಸರು ಹೊರಬಿದ್ದಿದ್ದು, ಹಲವು ತಿಂಗಳ ಕಾಲ ನಡೆದ ವಿಚಾರಣೆಯ ಬಳಿಕ ಇದೀಗ ಅಂತಿಮ ತೀರ್ಪು ಹೊರಬಿದ್ದಿದೆ. ಚಿನ್ನವನ್ನು ವಿದೇಶದಿಂದ ಅಕ್ರಮವಾಗಿ ತರಲು ನಟಿ ಪ್ರಮುಖ ಪಾತ್ರವಹಿಸಿದ್ದನ್ನು ತನಿಖಾ ಸಂಸ್ಥೆ ದೃಢಪಡಿಸಿದೆ.

