ಜಮ್ಮು: ಜಮ್ಮುವಿನ ತಾವಿ ಸೇತುವೆ ಭಾರೀ ಮಳೆಯ ಪರಿಣಾಮ ಉಂಟಾದ ನೆರೆ ಹಾವಳಿಯಿಂದ ಆಗಸ್ಟ್ 26 ರಂದು ಕುಸಿದು ಬಿದ್ದಿತು. ತಕ್ಷಣ ತುರ್ತು ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಸೇನೆಯ ಟೈಗರ್ ಡಿವಿಷನ್ ಇಂಜಿನಿಯರ್ ಪಡೆ ಕಾರ್ಯಕ್ಕೆ ಮುಂದಾಯಿತು. ಕೇವಲ 12 ಗಂಟೆಗಳಲ್ಲೇ 110 ಅಡಿ ಉದ್ದದ ಬೈಲಿ ಸೇತುವೆ ಯನ್ನು ನಿರ್ಮಿಸಿ ಸಾರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದೆ.



ಸೇನೆಯ ಈ ತ್ವರಿತ ಕ್ರಮದಿಂದ ನೆರೆಪೀಡಿತ ಪ್ರದೇಶದಲ್ಲಿ ವಾಹನ ಸಂಚಾರ ಮತ್ತೆ ಪ್ರಾರಂಭವಾಗಿ ಜನಜೀವನಕ್ಕೆ ದೊಡ್ಡ ಮಟ್ಟದ ನೆರವಾಗಿದ್ದು, ಸಂಪರ್ಕ ಕಳೆದುಕೊಂಡಿದ್ದ ಪ್ರಮುಖ ಪ್ರದೇಶಗಳಿಗೆ ತಲುಪುವ ದಾರಿ ಮರುಸ್ಥಾಪನೆಗೊಂಡಿದೆ.
ಸ್ಥಳೀಯರು ಸೇನೆಯ ತುರ್ತು ಸೇವೆಗೆ ಕೃತಜ್ಞತೆ ಸಲ್ಲಿಸಿದ್ದು, ವಿಪತ್ತು ಸಂದರ್ಭದಲ್ಲಿ ಭಾರತೀಯ ಸೇನೆ ಮತ್ತೆ ಜನರ ಜೀವನಕ್ಕೆ ಭದ್ರತೆ ಒದಗಿಸಿದಂತಾಗಿದೆ.

