ಕಾಬೂಲ್: ಪೂರ್ವ ಆಫ್ಘಾನಿಸ್ತಾನವನ್ನು ತೀವ್ರ ಭೂಕಂಪ ಒಂದು ನಡುಗಿಸಿದ್ದು, ಸಾವಿನ ಸಂಖ್ಯೆ 800 ದಾಟಿದೆ. ಇನ್ನೂ ಕನಿಷ್ಠ 2,000 ಜನರು ಗಾಯಗೊಂಡಿದ್ದಾರೆಂದು ಅಂದಾಜಿಸಲಾಗಿದೆ.

ಭಾನುವಾರ ರಾತ್ರಿ ಸಂಭವಿಸಿದ ಈ ಭೂಕಂಪವು 6.0 ತೀವ್ರತೆಯದಾಗಿದ್ದು, ಕೇವಲ 8 ಕಿಮೀ ಆಳದಲ್ಲಿ ಸಂಭವಿಸಿರುವುದರಿಂದ ಹೆಚ್ಚಿನ ನಾಶವನ್ನುಂಟುಮಾಡಿದೆ. ಭೂಕಂಪದಿಂದ ಅತ್ಯಂತ ಹೆಚ್ಚಿನ ಹಾನಿ ನಂಗರ್‌ಹಾರ್ ಮತ್ತು ಕುನಾರ್ ಪ್ರಾಂತ್ಯಗಳಲ್ಲಿ ದಾಖಲಾಗಿದೆ. ಆದರೆ ಅದರ ಕಂಪನ ಕಾಬೂಲ್ ಸೇರಿದಂತೆ ಪಕ್ಕದ ಪ್ರಾಂತ್ಯಗಳಲ್ಲಿಯೂ, ಪಾಕಿಸ್ತಾನದ ಇಸ್ಲಾಮಾಬಾದ್ ನಗರದಲ್ಲಿಯೂ ಅನುಭವವಾಯಿತು.
ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸೇನೆ ಹಾಗೂ ರಕ್ಷಣಾ ಸಿಬ್ಬಂದಿ ಹೆಲಿಕಾಪ್ಟರ್‌ಗಳ ಸಹಾಯದಿಂದ ಪೀಡಿತ ಪ್ರದೇಶಗಳಲ್ಲಿ ಜೀವ ರಕ್ಷಣೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ರಕ್ಷಣಾ ಕಾರ್ಯ ಮುಂದುವರಿದಂತೆ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ವ್ಯಕ್ತವಾಗಿದೆ.

