ಆಸ್ಟ್ರೇಲಿಯಾ ವೇಗಿ ಟಿ–20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

ಆಸ್ಟ್ರೇಲಿಯಾ ವೇಗಿ ಟಿ–20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

ಆಸ್ಟ್ರೇಲಿಯಾದ ಬೌಲರ್ ಮಿಚೆಲ್ ಸ್ಟಾರ್ಕ್ ಟಿ–20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಎಡಗೈ ವೇಗಿ ಬೌಲರ್‌ಗಳಲ್ಲಿ ಒಬ್ಬರಾಗಿರುವ ಸ್ಟಾರ್ಕ್, ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಸ್ಟಾರ್ಕ್ 2012ರಲ್ಲಿ ಟಿ–20 ಅಂತರರಾಷ್ಟ್ರೀಯ ಪ್ರವೇಶ ಪಡೆದಿದ್ದು, ತಮ್ಮ ತೀಕ್ಷ್ಣ ವೇಗ ಮತ್ತು ನಿಖರ ಯೋರ್ಕರ್‌ಗಳ ಮೂಲಕ ಪ್ರತಿಸ್ಪರ್ಧಿಗಳನ್ನು ಸಂಕಷ್ಟಕ್ಕೆ ತಳ್ಳುತ್ತಿದ್ದರು. ಆಸ್ಟ್ರೇಲಿಯಾ ತಂಡಕ್ಕೆ ಹಲವು ಮಹತ್ವದ ಗೆಲುವುಗಳನ್ನು ತಂದುಕೊಟ್ಟ ಅವರು, 2021ರಲ್ಲಿ ಟಿ–20 ವಿಶ್ವಕಪ್ ಗೆಲುವಿನಲ್ಲೂ ಪ್ರಮುಖ ಪಾತ್ರವಹಿಸಿದ್ದರು.

ಟಿ–20 ಕ್ರಿಕೆಟ್‌ನಿಂದ ನಿವೃತ್ತಿಯಾದರೂ, ಸ್ಟಾರ್ಕ್ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ಗಳಲ್ಲಿ ಮುಂದುವರಿಯಲಿದ್ದಾರೆ.

ಕ್ರೀಡೆ