ಮೈಸೂರಿನಲ್ಲಿ ರಾಷ್ಟ್ರಪತಿ ಮುರ್ಮು – ಸಿದ್ದರಾಮಯ್ಯ ಪ್ರಶ್ನೆಗೆ ರಾಷ್ಟ್ರಪತಿ ಉತ್ತರ

ಮೈಸೂರಿನಲ್ಲಿ ರಾಷ್ಟ್ರಪತಿ ಮುರ್ಮು – ಸಿದ್ದರಾಮಯ್ಯ ಪ್ರಶ್ನೆಗೆ ರಾಷ್ಟ್ರಪತಿ ಉತ್ತರ

ಇಂದು ಮೈಸೂರು ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರ ನಡುವೆ ನಡೆದ ಹಾಸ್ಯಮಯ ಸಂಭಾಷಣೆ ಎಲ್ಲರ ಗಮನ ಸೆಳೆಯಿತು. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (AIISH) ವಜ್ರ ಮಹೋತ್ಸವ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿಯನ್ನು ಉದ್ದೇಶಿಸಿ, “ನಿಮಗೆ ಕನ್ನಡ ಬರುವುದೇ?” ಎಂದು ನಗೆಮುಖದಿಂದ ಕೇಳಿದರು.

ಅದಕ್ಕೆ ರಾಷ್ಟ್ರಪತಿ ಮುರ್ಮು ಅವರು ಮಂದಹಾಸದಿಂದ ಪ್ರತಿಕ್ರಿಯಿಸಿ, “ನನಗೆ ಕನ್ನಡ ಬರುವುದಿಲ್ಲ. ಆದರೆ ನಾನು ಕಲಿಯುತ್ತೇನೆ” ಎಂದು ಭರವಸೆ ನೀಡಿದರು.

ಅವರು ತಮ್ಮ ಭಾಷಣದಲ್ಲಿ ಹೀಗೆಂದರು – “ಕನ್ನಡ ನನ್ನ ಮಾತೃಭಾಷೆಯಲ್ಲದಿದ್ದರೂ, ನನ್ನ ದೇಶದ ಎಲ್ಲಾ ಭಾಷೆಗಳು, ಸಂಸ್ಕೃತಿಗಳು ಮತ್ತು ಪರಂಪರೆಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಪ್ರತಿಯೊಬ್ಬರೂ ತಮ್ಮ ಭಾಷೆಯನ್ನು ಉಳಿಸಿಕೊಂಡು, ಸಂಸ್ಕೃತಿ-ಪರಂಪರೆಯನ್ನು ಕಾಯ್ದುಕೊಂಡು ಮುಂದಕ್ಕೆ ಸಾಗಲಿ ಎಂದು ಹಾರೈಸುತ್ತೇನೆ. ಕನ್ನಡವನ್ನೂ ಸ್ವಲ್ಪಸ್ವಲ್ಪವಾಗಿ ಕಲಿಯುವ ಪ್ರಯತ್ನ ಮಾಡುತ್ತೇನೆ” ಎಂದು ಹೇಳಿದರು.

ಈ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ಚಂದ್ ಗೇಹ್ಲೋಟ್, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಹಾಯಕ ಸಚಿವೆ ಅನುಪ್ರಿಯಾ ಪಟೇಲ್, ರಾಜ್ಯ ಆರೋಗ್ಯ ಸಚಿವೆ ದಿನೇಶ್ ಗುಂಡೂರಾವ್, ಹಾಗೂ ಮೈಸೂರು ಅರಮನೆಯ ಉತ್ತರಾಧಿಕಾರಿ ಮತ್ತು ಸಂಸದ ಯದುವೀರ ಒಡೆಯರ್ ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಅವರು ಇತ್ತೀಚೆಗೆ “ಈ ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಕಲಿಯಲೇಬೇಕು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ವಿರೋಧ ಪಕ್ಷಗಳಿಂದ ಆಕ್ಷೇಪ ವ್ಯಕ್ತವಾಗಿದ್ದರೂ, ಕನ್ನಡದ ಬಳಕೆ ವಿಸ್ತರಿಸಬೇಕು ಎಂಬ ಅವರ ನಿಲುವು ಮುಂದುವರಿದಿದೆ.

ರಾಜ್ಯ ರಾಷ್ಟ್ರೀಯ