ಮೇಕ್ ಇನ್ ಇಂಡಿಯಾ ಯೋಜನೆಗೆ ಬಲ – ಭಾರತದ ಮೊದಲ ಟೆಂಪರ್ಡ್ ಗ್ಲಾಸ್ ಉತ್ಪಾದನಾ ಘಟಕ ಉದ್ಘಾಟನೆ

ಮೇಕ್ ಇನ್ ಇಂಡಿಯಾ ಯೋಜನೆಗೆ ಬಲ – ಭಾರತದ ಮೊದಲ ಟೆಂಪರ್ಡ್ ಗ್ಲಾಸ್ ಉತ್ಪಾದನಾ ಘಟಕ ಉದ್ಘಾಟನೆ

ಭಾರತದ ಮೊದಲ ಟೆಂಪರ್ಡ್ ಗ್ಲಾಸ್ ಉತ್ಪಾದನಾ ಘಟಕವನ್ನು ಉತ್ತರ ಪ್ರದೇಶದ ನೋಯ್ಡಾದಲ್ಲಿ ಪ್ರಾರಂಭಿಸಲಾಗಿದೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಉದ್ಘಾಟಿಸಿದ ಈ ಘಟಕಕ್ಕೆ ₹800 ಕೋಟಿ ಹೂಡಿಕೆ ಆಗಲಿದೆ. ಇದರ ಮೂಲಕ 4,500 ಉದ್ಯೋಗಗಳು ಸೃಷ್ಟಿಯಾಗಲಿದ್ದು, ವರ್ಷಕ್ಕೆ 200 ಮಿಲಿಯನ್ ಯೂನಿಟ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.

ಈ ಮೂಲಕ ಭಾರತದ “ಮೇಕ್ ಇನ್ ಇಂಡಿಯಾ” ಎಲೆಕ್ಟ್ರಾನಿಕ್ಸ್ ಕ್ಷೇತ್ರಕ್ಕೆ ದೊಡ್ಡ ಉತ್ತೇಜನ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಂತ್ರಜ್ಞಾನ