ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ “ಆರ್‌ಸಿಬಿ ಕೇರ್ಸ್” ಘೋಷಣೆ

ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ “ಆರ್‌ಸಿಬಿ ಕೇರ್ಸ್” ಘೋಷಣೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಜೂನ್ 4, 2025ರಂದು ಸಂಭವಿಸಿದ ದುರ್ಘಟನೆಯಲ್ಲಿ ತನ್ನ 11 ಸದಸ್ಯರನ್ನು ಕಳೆದುಕೊಂಡಿದೆ. ಈ ಘಟನೆಯ ನಂತರ ಆರ್‌ಸಿಬಿ ಮೌನಕ್ಕೆ ಶರಣಾಗಿತ್ತು. ಈಗ ಸಾಮಾಜಿಕ ಜಾಲತಾಣದ ಮೂಲಕ ಹೊಸ ಘೋಷಣೆ ಒಂದನ್ನು ಮಾಡಿದೆ.

ತಂಡದ ಅಧಿಕೃತ ಪ್ರಕಟಣೆಯಲ್ಲಿ, “ಅವರು ನಮ್ಮ ಭಾಗವಾಗಿದ್ದರು. ನಮ್ಮ ನಗರ, ನಮ್ಮ ಸಮುದಾಯ ಮತ್ತು ತಂಡವನ್ನು ವಿಶಿಷ್ಟಗೊಳಿಸಿದವರು. ಅವರ ಅಭಾವ ನಮ್ಮ ನೆನಪುಗಳಲ್ಲಿ ಸದಾ ಜೀವಂತವಾಗಿರುತ್ತಾನೆ,” ಎಂದು ತಿಳಿಸಿದೆ.

ಅಗಲಿದವರ ಕುಟುಂಬಗಳಿಗೆ ಆರ್‌ಸಿಬಿ ಪ್ರತಿ ಕುಟುಂಬಕ್ಕೂ ₹25 ಲಕ್ಷ ಪರಿಹಾರವನ್ನು ನೀಡಿದೆ ಎಂದು ತಿಳಿಸಿದೆ. ಇದು ಕೇವಲ ಆರ್ಥಿಕ ನೆರವಲ್ಲ, ಸಹಾನುಭೂತಿ, ಏಕತೆ ಮತ್ತು ನಿತ್ಯಕಾಳಜಿಯ ಸಂಕೇತವಾಗಿದೆ ಎಂದು ತಂಡ ಸ್ಪಷ್ಟಪಡಿಸಿದೆ.

ಇದೇ ಸಂದರ್ಭದಲ್ಲಿ, ಆರ್‌ಸಿಬಿ ‘RCB Cares’ ಎಂಬ ಹೊಸ ದೀರ್ಘಕಾಲಿಕ ಯೋಜನೆಯನ್ನು ಘೋಷಿಸಿದೆ. ಈ ಯೋಜನೆ ಅರ್ಥಪೂರ್ಣ ಸಾಮಾಜಿಕ ಕಾರ್ಯಗಳ ಮೂಲಕ ಅಗಲಿದವರ ನೆನಪನ್ನು ಗೌರವಿಸುವ ಮತ್ತು ಅಭಿಮಾನಿಗಳ ಭಾವನೆ, ನಿರೀಕ್ಷೆ, ಹಾಗೂ ಹಕ್ಕುಗಳನ್ನು ಪ್ರತಿಬಿಂಬಿಸುವ ಗುರಿಯನ್ನು ಹೊಂದಿದೆ ಎಂದು ತನ್ನ ಸಾಮಾಜಿಕ ಜಾಲತಾಣದ ಪ್ರಕಟಣೆಯಲ್ಲಿ ತಿಳಿಸಿದೆ.

“ಆರ್‌ಸಿಬಿ ಕೇರ್ಸ್” ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ಕ್ರೀಡೆ ರಾಜ್ಯ