ದೆಹಲಿ: ಆರ್ಮಿ ಆಸ್ಪತ್ರೆ ರಿಸರ್ಚ್ ಅಂಡ್ ರೆಫರಲ್ (AHRR) ಮಹತ್ವದ ಸಾಧನೆ ಮಾಡಿದ್ದು, ದೇಶದ ಮೊದಲ ಸರ್ಕಾರಿ ಕ್ಷೇತ್ರದ ರೋಬೋಟಿಕ್ ಕಸ್ಟಮ್ ಲೇಸರ್ ಕಟಾರಾಕ್ಟ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ.




ALLY Adaptive Cataract Treatment System ಬಳಸಿ ನಡೆದ ಈ ಶಸ್ತ್ರಚಿಕಿತ್ಸೆ, ಕಣ್ಣಿನ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆಯಾಗಿದೆ. ಬ್ಲೇಡಿಲ್ಲದೆ, ಕಂಪ್ಯೂಟರ್ ತಂತ್ರಜ್ಞಾನ ಸಹಾಯದಿಂದ ನಡೆಯುವ ಈ ವಿಧಾನ ರೋಗಿಗಳಿಗೆ ಹೆಚ್ಚು ಸುರಕ್ಷಿತ ಹಾಗೂ ನಿಖರ ಚಿಕಿತ್ಸೆಯನ್ನು ಒದಗಿಸುತ್ತದೆ.
ಸಶಸ್ತ್ರ ಪಡೆಗಳು ತಮ್ಮ ಸಿಬ್ಬಂದಿ ಹಾಗೂ ಅವರ ಕುಟುಂಬಗಳಿಗೆ ಅತ್ಯಾಧುನಿಕ ಆರೋಗ್ಯ ಸೇವೆ ನೀಡುವ ಬದ್ಧತೆಯ ಸಂಕೇತವಾಗಿ ಈ ಶಸ್ತ್ರಚಿಕಿತ್ಸೆ ದೇಶದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ.

