ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ 2025ರಲ್ಲಿ ಭಾರತದ ಪಿವಿ ಸಿಂಧು ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಮೆರೆದಿದ್ದಾರೆ.


ವಿಶ್ವ ನಂ. 2 ಚೀನಾ ಆಟಗಾರ್ತಿ ವಾಂಗ್ ಝಿಯಿಯಿಯನ್ನು ಪಿವಿ ಸಿಂಧು ನೇರ ಸೇಟುಗಳಲ್ಲಿ ಸೋಲಿಸಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದಾರೆ. ಪಂದ್ಯದಲ್ಲಿ ಸಿಂಧು 21-19, 21-15 ಅಂಕಗಳಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಪ್ರಬಲ ಎದುರಾಳಿ ವಿರುದ್ಧ ಸಿಂಧು ತೋರಿಸಿದ ದಿಟ್ಟ ಆಟಕ್ಕೆ ಕ್ರೀಡಾಭಿಮಾನಿಗಳಿಂದ ಭಾರೀ ಶ್ಲಾಘನೆ ವ್ಯಕ್ತವಾಗಿದೆ. ಈ ಗೆಲುವಿನಿಂದ ಸಿಂಧು ಚಾಂಪಿಯನ್ಶಿಪ್ನಲ್ಲಿ ಪದಕದ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.

