ಇತಿಹಾಸ ನಿರ್ಮಿಸಿದ “ಮಹಾವತಾರ ನರಸಿಂಹ” – 300 ಕೋಟಿ ಕ್ಲಬ್ ಸೇರ್ಪಡೆ!

ಇತಿಹಾಸ ನಿರ್ಮಿಸಿದ “ಮಹಾವತಾರ ನರಸಿಂಹ” – 300 ಕೋಟಿ ಕ್ಲಬ್ ಸೇರ್ಪಡೆ!

ಭಾರತೀಯ ಅನಿಮೇಷನ್ ಚಲನಚಿತ್ರ ಲೋಕದಲ್ಲಿ ಮಹತ್ವದ ಇತಿಹಾಸ ನಿರ್ಮಾಣವಾಗಿದೆ. ಮಹಾವತಾರ ನರಸಿಂಹ ಸಿನಿಮಾ, ಪ್ರಪಂಚದ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ಕ್ಲಬ್ ಸೇರ್ಪಡೆಯಾದ ಭಾರತದ ಮೊದಲ ಅನಿಮೇಷನ್ ಚಿತ್ರವಾಗಿದೆ.

ವಾರದಿಂದ ವಾರಕ್ಕೆ ಹೊಸ ಹೊಸ ಚಿತ್ರಗಳು ಬಿಡುಗಡೆಯಾದರೂ, ಈ ಮಹಾಕಾವ್ಯಾಧಾರಿತ ಚಿತ್ರ ತನ್ನ ಹೆಜ್ಜೆಯನ್ನು ನಿಲ್ಲಿಸದೆ ಯಶಸ್ಸಿನತ್ತ ದಾಪುಗಾಲಿಡುತ್ತಿದೆ. ಇತ್ತೀಚೆಗೆ “ವಾರ್ 2”, “ಕುಲಿ” ಮುಂತಾದ ದೊಡ್ಡ ಚಿತ್ರಗಳೂ ಬಿಡುಗಡೆಯಾದರೂ, ಮಹಾವತಾರ ನರಸಿಂಹ ತನ್ನ ಅಬ್ಬರವನ್ನು ಮುಂದುವರಿಸಿದೆ.

ಹಲವಾರು ದಾಖಲೆಗಳನ್ನು ಬರೆದಿರುವ ಈ ಚಿತ್ರ ಈಗ 300 ಕೋಟಿ ರೂಪಾಯಿ ಮೈಲಿಗಲ್ಲು ತಲುಪಿ “ಟ್ರಿಪಲ್ ಸೆಂಚುರಿ” ಸಾಧನೆಗೈದಿದೆ.

ಭಾರತೀಯ ಅನಿಮೇಷನ್ ಕ್ಷೇತ್ರಕ್ಕೆ ಇದು ಐತಿಹಾಸಿಕ ಕ್ಷಣವಾಗಿದ್ದು, ಮಹಾವತಾರ ನರಸಿಂಹ ಚಿತ್ರವು ಭಾರತದ ಸೃಜನಶೀಲತೆ ಮತ್ತು ತಾಂತ್ರಿಕ ಸಾಮರ್ಥ್ಯದ ಸಾಕ್ಷಿಯಾಗಿದೆ.

ಮನೋರಂಜನೆ