ಬೆಂಗಳೂರು: ಇನ್ಫೋಸಿಸ್ ಸಂಸ್ಥೆ ತನ್ನ ನೌಕರರಿಗೆ ದೊಡ್ಡ ಮಟ್ಟದ ಸಿಹಿ ಸುದ್ದಿ ನೀಡಿದೆ. ಸಂಸ್ಥೆಯು 2025-26ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1) ಲಾಭದಲ್ಲಿ 8.7% ಏರಿಕೆಯನ್ನು ಸಾಧಿಸಿರುವ ಹಿನ್ನೆಲೆ, ಸರಾಸರಿ 80% ಬೋನಸ್ ನೌಕರರಿಗೆ ನೀಡಲು ನಿರ್ಧರಿಸಿದೆ.

ಮುಂಬರುವ ಬೋನಸ್ ಮೊತ್ತವು ಕಳೆದ ತ್ರೈಮಾಸಿಕದ 65%ರಿಂದ ಹೆಚ್ಚಳವಾಗಿ 80% ಆಗಿದೆ. ವಿಶೇಷವಾಗಿ PL4 ರಿಂದ PL6 ಹುದ್ದೆಯ ನೌಕರರಿಗೆ 75%ರಿಂದ 89%ರವರೆಗೆ ಬೋನಸ್ ದೊರಕಲಿದೆ.
ಕಂಪನಿಯು ಈ ಅವಧಿಯಲ್ಲಿ ₹6,921 ಕೋಟಿ ಲಾಭ ದಾಖಲಿಸಿದ್ದು, ಆದಾಯವು 7.5% ಏರಿಕೆಯಾಗಿ ₹42,279 ಕೋಟಿ ತಲುಪಿದೆ. ಕಳೆದ ಕೆಲವು ವರ್ಷಗಳಲ್ಲಿ ಇದು ನೌಕರರಿಗೆ ನೀಡಲಾದ ಅತಿದೊಡ್ಡ ಬೋನಸ್ ಪ್ಯಾಕೇಜ್ ಎಂದು ತಿಳಿದುಬಂದಿದೆ.
ಇನ್ಫೋಸಿಸ್‌ನ ಈ ಹೆಜ್ಜೆ ನೌಕರರಲ್ಲಿ ಸಂತಸ ಮೂಡಿಸಿದ್ದು, ಸಂಸ್ಥೆಯ ಸಾಧನೆಯನ್ನು ಮತ್ತಷ್ಟು ಉತ್ತೇಜನಗೊಳಿಸುವ ನಿರೀಕ್ಷೆ ವ್ಯಕ್ತವಾಗಿದೆ.

