ವೈವಾಹಿಕ ಜೀವನಕ್ಕೆ ಕಾಲಿಟ್ಟ ಆಂಕರ್ ಅನುಶ್ರೀ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಆಂಕರ್ ಅನುಶ್ರೀ

ccಬೆಂಗಳೂರು: ಪ್ರಸಿದ್ಧ ಟಿವಿ ನಿರೂಪಕಿ ಹಾಗೂ ನಟಿ ಅನುಶ್ರೀ ಅವರು ಇಂದು ಉದ್ಯಮಿ ರೋಷನ್ ಅವರನ್ನು ವಿವಾಹವಾಗಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಸಂಪ್ರದಾಯಬದ್ಧವಾಗಿ ಈ ಮದುವೆ ಸಮಾರಂಭದ ನೆರವೇರಿದೆ.

ಮದುವೆ ಪೂರ್ವ ಹಳದಿ ಕಾರ್ಯಕ್ರಮವು ನಿನ್ನೆ ಅತ್ಯಂತ ಅದ್ಧೂರಿಯಾಗಿ ನೆರವೇರಿತು. ಬಂಧುಬಳಗ, ಆಪ್ತ ಸ್ನೇಹಿತರು ಹಾಗೂ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಹೊಸ ದಂಪತಿಗೆ ಶುಭ ಹಾರೈಸಿದರು.

ಅನುಶ್ರೀ ವಿವಾಹ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.

ಮನೋರಂಜನೆ