ಸುಜುಕಿಯ ಇ-ವಿಟಾರಾ ಬಿಡುಗಡೆ: ಸ್ವದೇಶಿ ಜೀವನ ಮಂತ್ರವಾಗಲಿ – ಮೋದಿ

ಸುಜುಕಿಯ ಇ-ವಿಟಾರಾ ಬಿಡುಗಡೆ: ಸ್ವದೇಶಿ ಜೀವನ ಮಂತ್ರವಾಗಲಿ – ಮೋದಿ

ಅಮೇರಿಕಾ ಸುಂಕ ಜಾರಿಗೆ ಬರುವ ಮುನ್ನ ದಿನ, ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ ಮನೋಭಾವವನ್ನು ಒತ್ತಿ ಹೇಳಿದರು. ಗುಜರಾತ್‌ನ ಹಂಸಲ್ಪುರದಲ್ಲಿ ಸುಜುಕಿ ಮೋಟಾರ್ ಕಾರ್ಪೊರೇಷನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಭಾರತದಲ್ಲಿ ತಯಾರಾಗುವ ಉತ್ಪನ್ನ – ವಿದೇಶಿ ಹೂಡಿಕೆ ಆಗಿರಲಿ, ಯಾವುದೇ ಕರೆನ್ಸಿಯಿಂದ ತಯಾರಾಗಿರಲಿ ಅವು ಸ್ವದೇಶಿ” ಎಂದರು.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಸುಜುಕಿಯ ಮೊದಲ ‘ಮೇಡ್ ಇನ್ ಇಂಡಿಯಾ’ ಗ್ಲೋಬಲ್ ಎಲೆಕ್ಟ್ರಿಕ್ ಕಾರು ಇ-ವಿಟಾರಾವನ್ನು ಉದ್ಘಾಟಿಸಿ ಹಸಿರು ನಿಶಾನೆ ತೋರಿಸಿದರು. ಈ ವಾಹನಗಳನ್ನು ಯುಕೇ, ಯುರೋಪ್, ಜಪಾನ್ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲು ಸಿದ್ಧತೆ ನಡೆದಿದೆ.

ಅದೇ ರೀತಿ, ಟಿಡಿಎಸ್ ಲಿಥಿಯಂ-ಐಯಾನ್ ಪ್ಲಾಂಟ್‌ನಲ್ಲಿ ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ ಉತ್ಪಾದನೆಗೂ ಚಾಲನೆ ದೊರಕಿತು. ಇದು ದೇಶದ ಇ-ಆಂಬುಲೆನ್ಸ್ ಹಾಗೂ ಹೈಬ್ರಿಡ್ ವಾಹನಗಳಿಗೆ ಶಕ್ತಿ ನೀಡಲಿದೆ.

ಮೋದಿ ಅವರು, “ಬ್ಯಾಟರಿಗಳೇ ಎಲೆಕ್ಟ್ರಿಕ್ ವಾಹನಗಳ ಹೃದಯ. ಮೊದಲು ಇವುಗಳನ್ನು ಸಂಪೂರ್ಣವಾಗಿ ಆಮದು ಮಾಡಿಕೊಳ್ಳಬೇಕಾಗಿತ್ತು. ಆದರೆ ಈಗ ಭಾರತದಲ್ಲಿಯೇ ಉತ್ಪಾದನೆ ಆರಂಭವಾಗಿದೆ” ಎಂದರು. ಜಪಾನ್ ಕಂಪನಿಗಳ ಸಹಯೋಗದೊಂದಿಗೆ ದೇಶೀಯ ಬ್ಯಾಟರಿ ಸೆಲ್ ತಯಾರಿಕೆಗೆ ಚಾಲನೆ ದೊರಕಿದುದನ್ನು ಅವರು ಸ್ವಾವಲಂಬನೆಯ ದೊಡ್ಡ ಹೆಜ್ಜೆ ಎಂದು ಹೇಳಿದರು.

ಪ್ರಧಾನಿ ಮೋದಿ ಸೆಮಿಕಂಡಕ್ಟರ್ ತಯಾರಿಕೆ, ಕ್ರಿಟಿಕಲ್ ಮಿನರಲ್ ಮಿಷನ್ ಹಾಗೂ ಭವಿಷ್ಯದ ಕೈಗಾರಿಕೆಗಳ ಅಭಿವೃದ್ಧಿಯನ್ನು ಉಲ್ಲೇಖಿಸಿ, “ಮಿಷನ್ ಮ್ಯಾನ್ಯುಫ್ಯಾಕ್ಚರಿಂಗ್ ಮೂಲಕ 2047ರ ಗುರಿಗಳನ್ನು ಸಾಧಿಸುತ್ತೇವೆ” ಎಂದರು.

ಮುಂದಿನ ವಾರ ಜಪಾನ್ ಭೇಟಿ ನೀಡಲಿರುವುದಾಗಿ ಘೋಷಿಸಿದ ಮೋದಿ, “ಭಾರತ-ಜಪಾನ್ ಸಂಬಂಧವು ಕೇವಲ ರಾಜತಾಂತ್ರಿಕವಲ್ಲ, ಅದು ಸಂಸ್ಕೃತಿ ಹಾಗೂ ನಂಬಿಕೆಯಿಂದ ಕೂಡಿದೆ” ಎಂದು ಹೇಳಿದರು.

ತಂತ್ರಜ್ಞಾನ ರಾಷ್ಟ್ರೀಯ ವಾಹನ ಸುದ್ದಿ