ಕಾಮನ್‌ವೆಲ್ತ್ ವೆಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ 2025: ಮೀರಾಬಾಯಿ ಚಾನುಗೆ ಚಿನ್ನ

ಕಾಮನ್‌ವೆಲ್ತ್ ವೆಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ 2025: ಮೀರಾಬಾಯಿ ಚಾನುಗೆ ಚಿನ್ನ

ವೆಟ್‌ಲಿಫ್ಟರ್ ಮೀರಾಬಾಯಿ ಚಾನು ಮತ್ತೊಮ್ಮೆ ಭಾರತದ ಕೀರ್ತಿಯನ್ನು ವಿಶ್ವ ವೇದಿಕೆಯಲ್ಲಿ ಬೆಳಗಿಸಿದ್ದಾರೆ. ಅಹಮದಾಬಾದ್‌ನಲ್ಲಿ ನಡೆದ ಕಾಮನ್‌ವೆಲ್ತ್ ವೆಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ 2025ರಲ್ಲಿ ಅವರು ಚಿನ್ನದ ಪದಕ ಗೆದದುಕೊಂಡಿದ್ದಾರೆ.

ಈ ಜಯದೊಂದಿಗೆ 2026ರಲ್ಲಿ ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ನೇರ ಪ್ರವೇಶವನ್ನು ಮೀರಾಬಾಯಿ ಚಾನು ಖಚಿತಪಡಿಸಿಕೊಂಡಿದ್ದಾರೆ.

ಅನೇಕ ಸವಾಲುಗಳನ್ನು ಎದುರಿಸಿ, ಕಠಿಣ ಪರಿಶ್ರಮದ ಮೂಲಕ ಬಂದ ಈ ಸಾಧನೆ ಮೀರಾಬಾಯಿ ಚಾನು ಅವರ ದೃಢ ನಿಶ್ಚಯ ಮತ್ತು ಅಸಾಧಾರಣ ಶಕ್ತಿ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಅವರ ಈ ಗೆಲುವು ಕೇವಲ ತೂಕ ಎತ್ತುವಿಕೆಯಲ್ಲ, ದೇಶದ ಗೌರವವನ್ನು ಎತ್ತಿದಂತಾಗಿದೆ.

ಕ್ರೀಡೆ