ಅಂತರಿಕ್ಷಯಾನಿ ಶುಭಾಂಶು ಶುಕ್ಲಾ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ಅಂತರಿಕ್ಷಯಾನಿ ಶುಭಾಂಶು ಶುಕ್ಲಾ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ನವದೆಹಲಿ: ಭಾರತದ ಮೊದಲ ಅಂತರಿಕ್ಷಯಾನಿಯಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ISS)ಕ್ಕೆ ಭೇಟಿ ನೀಡಿ ಬಂದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.

ಇತ್ತೀಚೆಗೆ 20 ದಿನಗಳ ಬಾಹ್ಯಾಕಾಶ ಯಾನ ಮುಗಿಸಿ, ಆಕ್ಸಿಯಮ್ ಮಿಷನ್-4ರ ಭಾಗವಾಗಿ ಶುಕ್ಲಾ ಹಾಗೂ ಅವರ ಸಹ ಅಂತರಿಕ್ಷಯಾನಿಗಳು ಭೂಮಿಗೆ ಮರಳಿದ್ದರು. ಈ ಸಂದರ್ಭದಲ್ಲಿ ತಮ್ಮ ಬಾಹ್ಯಾಕಾಶ ಅನುಭವಗಳನ್ನು ರಾಷ್ಟ್ರಪತಿಗೆ ಹಂಚಿಕೊಂಡರು.

ಗ್ರೂಪ್ ಕ್ಯಾಪ್ಟನ್ ಶುಕ್ಲಾ ಅವರ ಜೊತೆಗೆ ಗ್ರೂಪ್ ಕ್ಯಾಪ್ಟನ್ ಪ್ರಸಂತ್ ಬಾಲಕೃಷ್ಣನ್ ನಾಯರ್, ಗ್ರೂಪ್ ಕ್ಯಾಪ್ಟನ್ ಪುಣ್ಯಶ್ಲೋಕ ಬಿಸ್ವಾಲ್, ಇಸ್ರೋ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ವಿ. ನಾರಾಯಣನ್ ಮತ್ತು ಮಾನವ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ದಿನೇಶ್ ಕುಮಾರ್ ಸಿಂಗ್ ಅವರು ಸಹ ರಾಷ್ಟ್ರಪತಿಯನ್ನು ಭೇಟಿಯಾದರು.

ಅವರ ಮಾತುಕತೆ ಬಳಿಕ, ರಾಷ್ಟ್ರಪತಿ ಮುರ್ಮು ಅವರು ತಂಡಕ್ಕೆ ಭವಿಷ್ಯದ ಎಲ್ಲಾ ಯೋಜನೆಗಳಿಗಾಗಿ ಶುಭ ಹಾರೈಸಿ, ವಿಶೇಷವಾಗಿ ಗಗನಯಾನ್ ಮಿಷನ್ ಯಶಸ್ವಿಯಾಗಲಿ ಎಂದು ಹಾರೈಸಿದರು ಎಂದು ರಾಷ್ಟ್ರಪತಿ ಭವನದ ಕಚೇರಿ ‘ಎಕ್ಸ್’ನಲ್ಲಿ ಪ್ರಕಟಿಸಿದೆ.

ರಾಷ್ಟ್ರೀಯ