🚨 ಸುಬ್ರಹ್ಮಣ್ಯ–ಸಕಲೇಶಪುರ ರೈಲು ಮಾರ್ಗದಲ್ಲಿ ಗುಡ್ಡ ಕುಸಿತ, ಸಂಚಾರ ಸ್ಥಗಿತ 🚨

🚨 ಸುಬ್ರಹ್ಮಣ್ಯ–ಸಕಲೇಶಪುರ ರೈಲು ಮಾರ್ಗದಲ್ಲಿ ಗುಡ್ಡ ಕುಸಿತ, ಸಂಚಾರ ಸ್ಥಗಿತ 🚨

ಸಕಲೇಶಪುರ: ಭಾರೀ ಮಳೆಯ ಪರಿಣಾಮವಾಗಿ ಆಗಸ್ಟ್ 16, 2025ರಂದು ಸಂಜೆ 4:40ಕ್ಕೆ ಶಿರಿಬಾಗಿಲು–ಎಡಕುಮೇರಿ, ಎಡಕುಮೇರಿ–ಕಡಗರವಳ್ಳಿ ಮತ್ತು ಕಡಗರವಳ್ಳಿ–ದೋಣಿಗಲ್ ನಡುವಿನ ಘಾಟ್ ಭಾಗದಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಇದರಿಂದಾಗಿ ಸುಬ್ರಹ್ಮಣ್ಯ ರೋಡ್–ಸಕಲೇಶಪುರ ನಡುವೆ ರೈಲು ಸಂಚಾರ ಸಂಪೂರ್ಣವಾಗಿ ವ್ಯತ್ಯಯಗೊಂಡಿದೆ.

🛠️ ತುರ್ತು ದುರಸ್ತಿ ಕಾರ್ಯಕ್ಕಾಗಿ ಸಾಮಗ್ರಿಗಳನ್ನು ಹೊತ್ತ ವಿಶೇಷ ರೈಲು ಸಂಜೆ 5:58ಕ್ಕೆ ಸಕಲೇಶಪುರದಿಂದ ತೆರಳಿ, ಕುಸಿತ ಸಂಭವಿಸಿದ ಸ್ಥಳಕ್ಕೆ ತಲುಪಿದೆ. ಪ್ರಸ್ತುತ ಮಣ್ಣು ಮತ್ತು ಅವಶೇಷ ತೆರವು ಕಾರ್ಯ ಚುರುಕುಗೊಂಡಿದೆ. ಎಂದು ರೈಲ್ವೇ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

👉 ಪ್ರಯಾಣಿಕರು ತಮ್ಮ ರೈಲಿನ ಸ್ಥಿತಿಯನ್ನು ತಿಳಿಯಲು ರೈಲ್ವೆ ಇಲಾಖೆಯ ಅಧಿಕೃತ ಜಾಲತಾಣ, NTES ಅಪ್ಲಿಕೇಶನ್ ಅಥವಾ Where is my Train ಎಂಬ ಖಾಸಗಿ ಅಪ್ಲಿಕೇಶನ್ ಬಳಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.

📞 ತುರ್ತು ಸಹಾಯಕ್ಕಾಗಿ 139ಗೆ ಕರೆಮಾಡಬಹುದಾಗಿದೆ ಅಥವಾ @RailwaySevaಗೆ ಟ್ವೀಟ್ ಮಾಡುವಂತೆ ವಿನಂತಿಸಲಾಗಿದೆ.

ರಾಜ್ಯ