ದೇಶದಾದ್ಯಂತ ಸುಮಾರು 1,150 ಟೋಲ್ ಪ್ಲಾಜಾಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೊಸ ‘ಫಾಸ್ಟ್ಯಾಗ್ ವಾರ್ಷಿಕ ಪಾಸ್’ ಸೌಲಭ್ಯವನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ.

ಈ ಯೋಜನೆಯ ಮುಖ್ಯ ಉದ್ದೇಶವು ಚಾಲಕರು ಟೋಲ್ ಪಾವತಿಸಲು ಆಗಾಗ ರೀಚಾರ್ಜ್ ಮಾಡುವ ತೊಂದರೆ ನಿವಾರಿಸುವುದು. ಒಂದು ಬಾರಿ ₹3,000 ಶುಲ್ಕ ಪಾವತಿಸಿದರೆ, ಚಾಲಕರಿಗೆ ಒಂದು ವರ್ಷದ ಅವಧಿಗೆ ಅಥವಾ 200 ಟೋಲ್ ಪ್ಲಾಜಾ ದಾಟುವವರೆಗೆ ಈ ಪಾಸ್ ಮಾನ್ಯವಾಗಿರಲಿದೆ.
ಫಾಸ್ಟ್ಯಾಗ್ ವಾರ್ಷಿಕ ಪಾಸ್ ಸೌಲಭ್ಯದಿಂದ ದೇಶದಾದ್ಯಂತ ವಾಹನ ಸಂಚಾರ ಇನ್ನಷ್ಟು ಸುಗಮವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಪ್ರಯಾಣಿಕರ ಸಮಯ ಉಳಿತಾಯ, ನಗದು ವ್ಯವಹಾರ ಕಡಿತ ಹಾಗೂ ದೀರ್ಘ ಸಾಲು ತಪ್ಪಿಸಲು ಈ ವ್ಯವಸ್ಥೆ ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
🔸ವಾರ್ಷಿಕ ಪಾಸ್ ಅನ್ನು ಹೇಗೆ ಸಕ್ರಿಯಗೊಳಿಸಬೇಕು?
- ರಜ್ಮಾರ್ಗ ಯಾತ್ರಾ ಆಪ್ .(ಆಂಡ್ರಾಯ್ಡ್/ಐಒಎಸ್) ಅಥವಾ NHAI ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಸಕ್ರಿಯಗೊಳಿಸಬಹುದು.
- ಮೊಬೈಲ್ ನಂಬರ್ ಅಥವಾ ವಾಹನ ನೋಂದಣಿ ಸಂಖ್ಯೆಯಿಂದ ಲಾಗಿನ್ ಮಾಡಿ ಅರ್ಹತೆ ಪರಿಶೀಲಿಸಬೇಕು. FASTag ಸಕ್ರಿಯವಾಗಿರಬೇಕು ಮತ್ತು VRN ಗೆ ಲಿಂಕ್ ಆಗಿರಬೇಕು.
- ವಾಹನದ ವಿವರಗಳು ಹಾಗೂ FASTag ID ನಮೂದಿಸಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
- ಬಳಿಕ ₹3,000 ಪಾವತಿಯನ್ನು UPI, ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ನೆಟ್‌ಬ್ಯಾಂಕಿಂಗ್ ಮೂಲಕ ನಡೆಸಬೇಕು.
- ಪಾವತಿ ಮತ್ತು ಪರಿಶೀಲನೆ ನಂತರ, ಪಾಸ್ ಸಾಮಾನ್ಯವಾಗಿ 2 ಗಂಟೆಗಳೊಳಗೆ (ಗರಿಷ್ಠ 24 ಗಂಟೆ) ಸಕ್ರಿಯಗೊಳ್ಳುತ್ತದೆ. SMS ಮೂಲಕ ದೃಢೀಕರಣ ಸಂದೇಶ ಕೂಡ ಬರುತ್ತದೆ.

