ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನ ನಿಯಂತ್ರಣ ರೇಖೆ (LoC) ಬಳಿ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಟೀಂ (BAT) ನಡೆಸಿದ ಪ್ರಮುಖ ಅತಿಕ್ರಮಣ ಯತ್ನವನ್ನು ಭಾರತೀಯ ಸೇನೆ ಬುಧವಾರ ತಡೆಹಿಡಿದಿದೆ. ಈ ವೇಳೆ ಉಭಯಪಕ್ಷಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ಹವಲ್ದಾರ್ ಅಂಕಿತ್ ಹುತಾತ್ಮರಾದರು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಆಪರೇಷನ್ ಸಿಂದೂರ್ ನಂತರ ಪಾಕಿಸ್ತಾನ ಸೇನೆಯಿಂದ ನಡೆದ ಮೊದಲ ದೊಡ್ಡ ಮಟ್ಟದ ಪ್ರಚೋದನೆ ಇದು ಎಂದು ಸೇನೆ ಹೇಳಿದೆ. ಆಗಸ್ಟ್ 12 ಮತ್ತು 13ರ ಮಧ್ಯರಾತ್ರಿ ಟಿಕ್ಕಾ ಪೋಸ್ಟ್ ಹತ್ತಿರ BAT ತಂಡ ದಾಳಿ ನಡೆಸಿದಾಗ, ಭಾರತೀಯ ಸೇನೆ ತೀವ್ರ ಪ್ರತಿದಾಳಿ ನಡೆಸಿತು.
ಕೆಲವೇ ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಭಾರತೀಯ ಸೇನೆ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

