ನವದೆಹಲಿ: 2030ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆತಿಥೇಯತೆ ವಹಿಸಲು ಭಾರತದ ಪ್ರಯತ್ನಕ್ಕೆ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ (IOA) ಅಧಿಕೃತ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಅಹಮದಾಬಾದ್ ನಗರವನ್ನು ಆತಿಥೇಯ ಸ್ಥಳವಾಗಿ ಪ್ರಸ್ತಾಪಿಸಲಾಗಿದೆ.

ವಿಶೇಷ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಅಂತಿಮ ಬಿಡ್ ದಾಖಲೆಗಳನ್ನು ಆಗಸ್ಟ್ 31ರಂದು ಸಲ್ಲಿಸಲಾಗುವುದು. ಕೆನಡಾ ಸ್ಪರ್ಧೆಯಿಂದ ಹಿಂದೆ ಸರಿದ ಹಿನ್ನೆಲೆ, ಭಾರತದ ಅವಕಾಶಗಳು ಇನ್ನಷ್ಟು ಬಲಗೊಂಡಿವೆ.
ಕಾಮನ್‌ವೆಲ್ತ್ ಸ್ಪೋರ್ಟ್ ಪ್ರತಿನಿಧಿ ಮಂಡಳಿ ಇತ್ತೀಚೆಗೆ ಅಹಮದಾಬಾದ್‌ನ ಕ್ರೀಡಾ ಸೌಕರ್ಯಗಳನ್ನು ಪರಿಶೀಲಿಸಿದ್ದು, ಭಾರತದ ಮನವಿಗೆ ಹೆಚ್ಚುವರಿ ಬಲ ನೀಡಿದೆ. ಅಂತಿಮ ತೀರ್ಮಾನ ಈ ವರ್ಷದ ನವೆಂಬರ್‌ನಲ್ಲಿ ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಸ್ಪೋರ್ಟ್ ಜನರಲ್ ಅಸೆಂಬ್ಲಿಯಲ್ಲಿ ಪ್ರಕಟವಾಗಲಿದೆ.

