ಪ್ರಧಾನಿಗೆ ಪತ್ರ ಬರೆದ 5 ವರ್ಷದ ಬೆಂಗಳೂರಿನ ಬಾಲಕಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್

ಪ್ರಧಾನಿಗೆ ಪತ್ರ ಬರೆದ 5 ವರ್ಷದ ಬೆಂಗಳೂರಿನ ಬಾಲಕಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್

ಬೆಂಗಳೂರಿನ ಐದು ವರ್ಷದ ಆರ್ಯಾ ಎಂಬ ಬಾಲಕಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹೃದಯಸ್ಪರ್ಶಿ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ ಅವರು ನಮ್ಮ ಮೆಟ್ರೋ ಯೆಲ್ಲೋ ಲೈನ್ ಉದ್ಘಾಟನೆಗಾಗಿ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ, “ನರೇಂದ್ರ ಮೋದಿ ಜೀ, ಇಲ್ಲಿ ಬಹಳ ಟ್ರಾಫಿಕ್ ಇದೆ. ನಾವು ಶಾಲೆಗೆ ಮತ್ತು ಕಚೇರಿಗೆ ತಡವಾಗಿ ತಲುಪುತ್ತೇವೆ. ರಸ್ತೆ ತುಂಬಾ ಕೆಟ್ಟ ಸ್ಥಿತಿಯಲ್ಲಿದೆ. ದಯವಿಟ್ಟು ಸಹಾಯ ಮಾಡಿ” ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಆರ್ಯಾಳ ತಂದೆ ಈ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ವೈರಲ್‌ ಆಗಿ 5.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನಗರದಲ್ಲಿನ ವಾಹನ ದಟ್ಟಣೆ ಮತ್ತು ರಸ್ತೆ ಮೂಲಸೌಕರ್ಯದ ಕೊರತೆ ಬಗ್ಗೆ ಮಕ್ಕಳ ಧ್ವನಿಯೇ ದೊಡ್ಡ ಮಟ್ಟದ ಗಮನ ಸೆಳೆಯುತ್ತಿದೆ ಎಂಬುದಕ್ಕೆ ಈ ಘಟನೆ ಉದಾಹರಣೆ ಆಗಿದೆ.

ರಾಜ್ಯ ರಾಷ್ಟ್ರೀಯ