ವಿಶೇಷಚೇತನ ಯುವಕ ಯುವತಿಯರಿಗೆ ನೇರ ನೇಮಕಾತಿ ಹಾಗೂ ಉಚಿತ ನೋಂದಣಿ ಶಿಬಿರ

ವಿಶೇಷಚೇತನ ಯುವಕ ಯುವತಿಯರಿಗೆ ನೇರ ನೇಮಕಾತಿ ಹಾಗೂ ಉಚಿತ ನೋಂದಣಿ ಶಿಬಿರ

ಪುತ್ತೂರು: ವಿಶೇಷಚೇತನ ಯುವಕರು ಹಾಗೂ ಯುವತಿಯರಿಗಾಗಿ “ಯೂಥ್ ಫಾರ್ ಜಾಬ್ಸ್” ಸಂಸ್ಥೆಯ ವತಿಯಿಂದ ಆಗಸ್ಟ್ 14, 2025ರಂದು ಉದ್ಯೋಗ ಮೇಳ ಹಾಗೂ ಉಚಿತ ನೋಂದಣಿ ಶಿಬಿರವನ್ನು ಪುತ್ತೂರಿನ ನೆಲ್ಲಿಕಟ್ಟೆ KSRTC ಬಸ್ ನಿಲ್ದಾಣದ ಎದುರಿನ ಬಿ.ಅರ್.ಸಿ.ಸಿ ಮಾದರಿ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

SSLC, PUC ಅಥವಾ ಯಾವುದೇ ಪದವಿ ಪಡೆದ 18 ರಿಂದ 35 ವರ್ಷದೊಳಗಿನ ವಿಕಲಚೇತನರು ಶಿಬಿರದಲ್ಲಿ ಭಾಗವಹಿಸಬಹುದು. ಆಸಕ್ತರು ಬಯೋಡೇಟಾ, ಅಂಗವಿಕಲ ಗುರುತಿನ ಚೀಟಿ (UDID), ಆಧಾರ್ ಕಾರ್ಡ್, ಶಿಕ್ಷಣ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಸೈಸ್ ಫೋಟೋ, ವೋಟರ್ ಐಡಿ ಮತ್ತು ರೇಷನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ತರಬೇಕು.

ಶಿಬಿರವು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 3.30ರವರೆಗೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ +91 9281416217 ಅಥವಾ +91 8296406891 ಸಂಖ್ಯೆಗೆ ಸಂಪರ್ಕಿಸಬಹುದು.

ಉದ್ಯೋಗ ರಾಜ್ಯ