ಹೋಂಬಾಳೆ ಫಿಲ್ಮ್ಸ್ ವತಿಯಿಂದ ‘ಕಾಂತಾರ ಟ್ಯಾಲೆಂಟ್ ಟ್ರೈಬ್’ ಸ್ಪರ್ಧೆ ಘೋಷಣೆ

ಹೋಂಬಾಳೆ ಫಿಲ್ಮ್ಸ್ ವತಿಯಿಂದ ‘ಕಾಂತಾರ ಟ್ಯಾಲೆಂಟ್ ಟ್ರೈಬ್’ ಸ್ಪರ್ಧೆ ಘೋಷಣೆ

ಬೆಂಗಳೂರು: ಜನಪ್ರಿಯ ಕಾಂತಾರ ಲೆಜೆಂಡ್ ಚಾಪ್ಟರ್ 1’ ಚಿತ್ರದ ಸ್ಫೂರ್ತಿಯಿಂದ ಕಲಾಕೃತಿಗಳನ್ನು ರಚಿಸಲು ಹೋಂಬಾಳೆ ಫಿಲ್ಮ್ಸ್ ವಿಶಿಷ್ಟ ಅಭಿಯಾನವನ್ನು ಘೋಷಿಸಿದೆ. ‘ಕಾಂತಾರ ಟ್ಯಾಲೆಂಟ್ ಟ್ರೈಬ್’ ಎಂದು ದೇಶದಾದ್ಯಂತದ ಕಲಾಭಿಮಾನಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವವರು ಕಾಂತಾರಾ ಪ್ರೇರಿತ ಫೋಟೋ, ವೀಡಿಯೋ, ಗ್ರಾಫಿಕ್ ಡಿಸೈನ್, ಪೇಂಟಿಂಗ್, ಸ್ಕೆಚ್ ಅಥವಾ AI ಆರ್ಟ್ ರಚಿಸಿ, www.kantara.world ವೆಬ್‌ಸೈಟ್ ಮೂಲಕ ಗರಿಷ್ಠ 10MB ಗಾತ್ರದ JPG, PNG ಅಥವಾ MP4 ಫಾರ್ಮ್ಯಾಟ್‌ನಲ್ಲಿ ಸಲ್ಲಿಸಬಹುದು.

ಆಯ್ಕೆಯಾದ ಕೃತಿಗಳನ್ನು ಹೋಂಬಾಳೆ ಫಿಲ್ಮ್ಸ್‌ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುತ್ತದೆ. ಟಾಪ್ 3 ವಿಜೇತರಿಗೆ ಚಿತ್ರದ ಪ್ರೀಮಿಯರ್ ಟಿಕೆಟ್‌ಗಳು ಹಾಗೂ ಟಾಪ್ 10 ಕೃತಿಗಳಿಗೆ ಸಹಿ ಹೊಂದಿದ ಮರ್ಚೆಂಡೈಸ್ ನೀಡಲಾಗುತ್ತದೆ ಎಂದು ಹೊಂಬಾಳೆ ಫಿಲ್ಮ್ಸ್ ತನ್ನ ಸೋಶಿಯಲ್ ಮೀಡಿಯಾ ದಲ್ಲಿ ತಿಳಿಸಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 15 ರಾತ್ರಿ 10:10.

ಅಂತರಾಷ್ಟ್ರೀಯ ಮನೋರಂಜನೆ