ಶಿಕ್ಷಣ ಬ್ರಹ್ಮ ಡಾ. ಕುರುಂಜಿ ವೆಂಕಟರಮಣ ಗೌಡರ 12ನೇ  ಪುಣ್ಯ ಸ್ಮರಣೆ

ಶಿಕ್ಷಣ ಬ್ರಹ್ಮ ಡಾ. ಕುರುಂಜಿ ವೆಂಕಟರಮಣ ಗೌಡರ 12ನೇ ಪುಣ್ಯ ಸ್ಮರಣೆ

ಇಂದು ಆಧುನಿಕ ಸುಳ್ಯದ ನಿರ್ಮಾತೃ ಶಿಕ್ಷಣ ಬ್ರಹ್ಮ ಡಾ. ಕುರುಂಜಿ ವೆಂಕಟರಮಣ ಗೌಡರ 12ನೇ ಪುಣ್ಯ ಸ್ಮರಣೆ. ಈ ಸಂದರ್ಭದಲ್ಲಿ ಕುರುಂಜಿ ಭಾಗ್ ನಲ್ಲಿರುವ ಡಾ. ಕುರುಂಜಿ ವೆಂಕಟರಮಣ ಗೌಡರ ಪ್ರತಿಮೆಗೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ ”ಬಿ” ಇದರ ಅಧ್ಯಕ್ಷರಾದ ಡಾ ರೇಣುಕಾಪ್ರಸಾದ್ ಕೆ. ವಿ ಅವರು ಪುಷ್ಪ ನಮನ ಸಲ್ಲಿಸುವ ಮೂಲಕ ಕುರುಂಜಿ ಅವರನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಅವರು ಕುರುಂಜಿ ಅವರ ಪಂಚ ಸೂತ್ರ ಮತ್ತು ಅವರ ಆದರ್ಶವನ್ನು ನಾವೆಲ್ಲಾ ಅಳವಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೆ ವಿ ಜಿ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು ಜೆ, ಶಾಫಿ ಕುಟ್ಟಮೊಟ್ಟೆ, ಸೂರಯ್ಯ ಸುಂತೋಡು, ಹಿರಿಯ ಪತ್ರಕರ್ತರಾದ ಹರೀಶ್ ಬಂಟ್ವಾಳ್, ಕಮಿಟಿ ಬಿ ಸಂಸ್ಥೆಗಳ ಪ್ರಾಂಶುಪಾಲರುಗಳು ಮತ್ತು ಸಿಬ್ಬಂದಿ ವರ್ಗದವರು ಮತ್ತು ಕುರುಂಜಿ ಅವರ ಅಭಿಮಾನಿಗಳು ಭಾಗವಹಿಸಿದರು.

ಕಮಿಟಿ ಬಿ ಇದರ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ರಾಜ್ಯ ಶೈಕ್ಷಣಿಕ