ಉತ್ತರಾಖಂಡದ ಧರಾಳಿ ಹಳ್ಳಿಯಲ್ಲಿ ಭೀಕರ ಮೆಘ ಸ್ಫೋಟ ಸಂಭವಿಸಿ ನದಿ ಉಕ್ಕಿ ಹರಿದ ಪರಿಣಾಮ ಭಾರೀ ಅನಾಹುತ ಸಂಭವಿಸಿದೆ. ಉತ್ತರಕಾಶಿ ಜಿಲ್ಲೆಯ ಹಾರ್ಸಿಲ್ ಸಮೀಪದ ಧರಾಳಿ ಹಳ್ಳಿಯಲ್ಲಿ ಸೋಮವಾರ ತೀವ್ರ ಮಳೆಯೊಂದಿಗೆ ಮೆಘ ಸ್ಫೋಟ ಸಂಭವಿಸಿದ್ದು, ಖೀರ್ ಗಂಗಾ ನದಿಯಲ್ಲಿ ಪ್ರವಾಹ ಉಂಟಾಗಿದೆ.

ನದಿಯು ಉಕ್ಕಿ ಹರಿದ ಪರಿಣಾಮ ಹಲವಾರು ಮನೆಗಳು, ಅಂಗಡಿಗಳು ಹಾಗೂ ರಸ್ತೆ ಸಂಪರ್ಕ ಸಂಪೂರ್ಣವಾಗಿ ನಾಶವಾಗಿದೆ. ಸ್ಥಳೀಯ ನಿವಾಸಿಗಳು ತೀವ್ರ ಆತಂಕದಲ್ಲಿದ್ದು, ಕೆಲವರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ತುರ್ತು ನೆರವಿಗೆ SDRF ಹಾಗೂ ಸೇನಾ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ರಕ್ಷಣಾ ಕಾರ್ಯಚರಣೆ ಆರಂಭಿಸಲಾಗಿದೆ.