ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಂತೆಯೇ, ಪಾಕಿಸ್ತಾನ ತಮ್ಮ ನಿಯಂತ್ರಣದಲ್ಲಿರುವ ಕಾಶ್ಮೀರ (PoK) ಪ್ರದೇಶದಲ್ಲಿ ಹೊಸದಾಗಿ 15ಕ್ಕೂ ಹೆಚ್ಚು ಉಗ್ರ ಶಿಬಿರಗಳನ್ನು ಪುನರ್ ನಿರ್ಮಿಸಿದ್ದಾಗಿ ಗುಪ್ತಚರ ಮೂಲಗಳು ತಿಳಿಸಿವೆ.

ಇತ್ತೀಚೆಗೆ ನಡೆದ ‘ಓಪರೇಷನ್ ಸಿಂದೂರ’ ಎಂಬ ಭಾರತದ ತೀವ್ರ ತಾಕೀತಿನ ಬಳಿಕ ಕೇವಲ 90 ದಿನಗಳೊಳಗೆ ಈ ಶಿಬಿರಗಳು ಮತ್ತೆ ನಿರ್ಮಾಣವಾಗಿದ್ದು, ಇದರಲ್ಲಿ ಪಾಕ್‌ನ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ISI) ಮತ್ತು ಇತರ ಸರ್ಕಾರಿ ಸಂಸ್ಥೆಗಳ ಬೆಂಬಲವಿರುವುದು ಬಹಿರಂಗವಾಗಿದೆ.
ಉಗ್ರರ ಲಾಂಚ್ ಪ್ಯಾಡ್‌ಗಳು ಸೇರಿದಂತೆ ಪುನಃ ಚಟುವಟಿಕೆಯಾಗುತ್ತಿರುವ ಈ ಶಿಬಿರಗಳು ಭಾರತದಲ್ಲಿ ಶಾಂತಿಯ ವಾತಾವರಣಕ್ಕೆ ಧಕ್ಕೆಯುಂಟುಮಾಡುವ ಭೀತಿ ಉಂಟುಮಾಡಿವೆ. ಭಾರತದಲ್ಲಿ ನಡೆದ ದಾಳಿ ವೇಳೆ ಕೊಲ್ಲಲ್ಪಟ್ಟ ಉಗ್ರರ ನೆನೆಪಿನಲ್ಲಿ ಪಾಕ್ ಸರ್ಕಾರವು ಪುನರ್ ನಿರ್ಮಾಣ ಕಾರ್ಯಕ್ಕೆ ಬೆಂಬಲ ನೀಡುತ್ತಿರುವುದು ವರದಿಯಾಗಿದೆ.