ಓವಲ್‌ನಲ್ಲಿ ಭಾರತಕ್ಕೆ ರೋಚಕ ಗೆಲುವು: ಇಂಗ್ಲೆಂಡ್‌ಗೆ 6 ರನ್ ಸೋಲು

ಓವಲ್‌ನಲ್ಲಿ ಭಾರತಕ್ಕೆ ರೋಚಕ ಗೆಲುವು: ಇಂಗ್ಲೆಂಡ್‌ಗೆ 6 ರನ್ ಸೋಲು

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸ್ಮರಣೀಯ ಕ್ಷಣವೊಂದನ್ನು ಭಾರತ ಒದಗಿಸಿದೆ. ಲಂಡನ್‌ನ ಓವಲ್ ಮೈದಾನದಲ್ಲಿ ನಡೆದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ ಕೇವಲ 6 ರನ್ ಅಂತರದಲ್ಲಿ ಜಯ ಗಳಿಸಿ, ತನ್ನ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಅಂತರದಲ್ಲಿ ಗೆಲುವನ್ನು ದಾಖಲಿಸಿದೆ.

ಈ ಜಯದೊಂದಿಗೆ ಐದು ಪಂದ್ಯಗಳ ಸರಣಿ 2-2ರಿಂದ ಸಮನಾಗಿ ಅಂತ್ಯವಾಯಿತು. ಈ ರೋಚಕ ಪಂದ್ಯದಲ್ಲಿ ಭಾರತವು ಕೊನೆ ಕ್ಷಣದವರೆಗೆ ಹೋರಾಟ ಮಾಡಿ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದೆ.

ಅಂತಿಮ ದಿನದ ರೋಚಕತೆ:
ಇಂಗ್ಲೆಂಡ್ ಗೆ ಅಂತಿಮ ದಿನದ ಆರಂಭದಲ್ಲಿ ಕೇವಲ 35 ರನ್ ಬೇಕಿತ್ತು. ಆದರೆ, ಭಾರತೀಯ ಬೌಲರ್‌ಗಳು ವಿಶೇಷವಾಗಿ ಮೊಹಮ್ಮದ್ ಸಿರಾಜ್ ಅವರ ಆಘಾತಕಾರಿ ಸ್ಪೆಲ್‌ ಕಾರಣದಿಂದ ಇಂಗ್ಲೆಂಡ್ ತನ್ನ ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 28 ರನ್‌ ಮಾತ್ರ ಗಳಿಸಿ ಸೋಲು ಕಂಡಿತು.

ಮೋಹಮ್ಮದ್ ಸಿರಾಜ್ – ಭಾರತಕ್ಕೆ ವಿಜಯ ತಂದ ಹೀರೋ
ಸಿರಾಜ್ ತನ್ನ ವೇಗ ಮತ್ತು ನಿಯಂತ್ರಿತ ಲೈನ್‌ನಿಂದ ಇಂಗ್ಲೆಂಡ್‌ನ ಬ್ಯಾಟಿಂಗ್ ಆರ್ಡರ್‌ಗೆ ಹೊಡೆತ ನೀಡಿದರು. ಆತನಿಂದ ಪಡೆದ ಮೂರು ಪ್ರಮುಖ ವಿಕೆಟ್‌ಗಳು ಪಂದ್ಯವನ್ನು ಭಾರತ ಪರ ಮಾಡಿತು.

ಕ್ರಿಕೆಟ್ ಪ್ರೇಮಿಗಳಿಗೆ ನೆನಪಿನಲ್ಲಿ ಉಳಿಯುವ ಪಂದ್ಯ
ಈ ಪಂದ್ಯವು ಟೆಸ್ಟ್ ಕ್ರಿಕೆಟ್‌ನ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಅಂತಿಮ ಕ್ಷಣದಲ್ಲಿ ನಡೆಯುವ ಹೋರಾಟಗಳು ಕ್ರಿಕೆಟ್‌ಗಾಗಿ ಜೀವಾಳ ಎಂದು ಪ್ರೂವ್ ಮಾಡಿದೆ.

ಕ್ರೀಡೆ