ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ಸಂಸ್ಥೆಯು ಭಾರತೀಯ ಕರಾವಳಿ ಭದ್ರತಾ ಪಡೆಗೆ (ICG) ನಿರ್ಮಿಸಿರುವ ಎರಡನೇ ಮತ್ತು ಕೊನೆಯ ಪ್ರಾದೇಶಿಕ ಪರಿಸರ ನಿಯಂತ್ರಣ ಹಡಗು ‘ಸಮುದ್ರ ಪ್ರಚೇತ್’ ಅನ್ನು ಯಶಸ್ವಿಯಾಗಿ ಲಾಂಚ್ ಮಾಡಲಾಗಿದೆ.



ಈ ಹಡಗಿನಲ್ಲಿ ಎರಡು ಬದಿಯ ಸ್ವೀಪಿಂಗ್ ಆರ್ಮ್‌ಗಳನ್ನು ಅಳವಡಿಸಲಾಗಿದ್ದು, ಸಾಗುವಾಗಲೇ ಎಣ್ಣೆ ಸೋರಿಕೆ ಶೇಖರಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಎಣ್ಣೆ ಸೋರಿಕೆಯ ಪತ್ತೆಗೆ ನೆರವುದಾಗುವ ಆಧುನಿಕ ರಡಾರ್ ವ್ಯವಸ್ಥೆ ಸಹ ಇದೆ.
ಈ ಹಡಗು 72% ದೇಶೀಯ ತಂತ್ರಜ್ಞಾನದಿಂದ ನಿರ್ಮಿತವಾಗಿದ್ದು, ಇದರಲ್ಲಿ 14 ಅಧಿಕಾರಿಗಳು ಮತ್ತು 115 ನಾವಿಕರು ಸೇವೆ ಸಲ್ಲಿಸಲಿದ್ದಾರೆ. ಈ ಯೋಜನೆಯು ಗೋವಾದ ಸ್ಥಳೀಯ ಕೈಗಾರಿಕೆಗಳು ಮತ್ತು ಎಂಎಸ್‌ಎಂಇಗಳಿಗೆ ಉದ್ಯೋಗಾವಕಾಶವನ್ನು ಒದಗಿಸಿ, ಕಡಲ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.