ದೆಹಲಿ: ಕೇವಲ 18 ತಿಂಗಳ ವಿವಾಹದ ನಂತರ ಮಹಿಳೆಯೊಬ್ಬರು ತಮ್ಮ ಪತಿಯ ಬಳಿ ₹12 ಕೋಟಿ ಜೀವನಾಂಶ , ಬಿಎಂಡಬ್ಲ್ಯು ಕಾರು ಹಾಗೂ ಮುಂಬೈಯಲ್ಲಿ ಲಕ್ಸುರಿ ಫ್ಲಾಟ್ ಬೇಡಿಕೆ ಇಟ್ಟಿದ್ದು, ಈ ವಿಷಯ ಸುಪ್ರೀಂ ಕೋರ್ಟ್‌ದ ಗಮನಕ್ಕೆ ಬಂದ ತಕ್ಷಣ, ನ್ಯಾಯಮೂರ್ತಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು –
“ಎಂ.ಬಿ.ಎ ಮಾಡಿದ, ಉದ್ಯೋಗಾವಕಾಶಗಳಿರುವ ಮಹಿಳೆ ಆದಾಯ ಗಳಿಸದಿರುವುದು ಪ್ರಶ್ನೆಯ ವಿಷಯ! ನಿಮ್ಮ ಬದುಕನ್ನು ನೀವು ನಡಿಸಬೇಕು – ಜೀವನಾಂಶ ಅವಲಂಬನೆ ಬೇಡ” ಎಂದು ಅಭಿಪ್ರಾಯಪಟ್ಟರು.
⚖️ ನ್ಯಾಯಾಲಯದ ಸ್ಪಷ್ಟನೆ:
ಜೀವನಾಂಶ ಮಹಿಳೆಯ ಆರ್ಥಿಕ ಸುರಕ್ಷತೆಗಾಗಿ ಹೊರತು, ಐಷಾರಾಮಿ ಜೀವನಕ್ಕಾಗಿ ಅಲ್ಲ. ಇದನ್ನು ಬಲವಂತದ ಹಗರಣಕ್ಕೆ ಪರಿವರ್ತನೆ ಮಾಡಬಾರದು.
ಶಿಕ್ಷಣ ಪಡೆದ, ತಂತ್ರಜ್ಞಾನ ಹಾಗೂ ಉದ್ಯೋಗದಲ್ಲಿ ಹಿನ್ನಲೆ ಇರುವವರು ತಮ್ಮ ಜೀವನವನ್ನು ಸ್ವತಂತ್ರವಾಗಿ ನಡಿಸಬೇಕು. ಜೀವನಾಂಶ ‘ವೆಲ್ಫೇರ್’ಗಾಗಿ, ‘ಲೈಫ್ಸ್ಟೈಲ್ ಎನ್‌ಹ್ಯಾನ್ಸ್‌ಮೆಂಟ್’ಗಾಗಿ ಅಲ್ಲ ಎಂದು ಸಪಷ್ಟಪಡಿಸಿದ್ದಾರೆ.