ಭಾರತೀಯ ಸೇನೆಯ ಗಮನ ಸೆಳೆದ ಬಿಟ್ಸ್ ವಿದ್ಯಾರ್ಥಿಗಳ ಆವಿಷ್ಕಾರ

ಭಾರತೀಯ ಸೇನೆಯ ಗಮನ ಸೆಳೆದ ಬಿಟ್ಸ್ ವಿದ್ಯಾರ್ಥಿಗಳ ಆವಿಷ್ಕಾರ

ಬಿಟ್ಸ್ ಪಿಲಾನಿ ಹೈದರಾಬಾದ್ ಕ್ಯಾಂಪಸ್‌ನ ಇಬ್ಬರು 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಕೇವಲ ಎರಡು ತಿಂಗಳೊಳಗೆ ತಮ್ಮ ಸ್ಟಾರ್ಟ್‌ಅಪ್ ‘ಅಪೋಲಿಯನ್ ಡೈನಾಮಿಕ್ಸ್’ (Apollyon Dynamics) ಮೂಲಕ ಅತ್ಯಾಧುನಿಕ ಯುಎವಿಗಳು (ಡ್ರೋನ್‌ಗಳು) ನಿರ್ಮಿಸಿ, ಭಾರತೀಯ ಸೇನೆಗೆ ಪೂರೈಕೆ ಮಾಡುವ ಮೂಲಕ ರಕ್ಷಣಾ ವಲಯದ ಗಮನ ಸೆಳೆದಿದ್ದಾರೆ.

ಅಜಮೇರಿನ ಮೆಕಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಜಯಂತ್ ಖತ್ರಿ ಮತ್ತು ಕೊಲ್ಕತ್ತಾದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಸೌರ್ಯ ಚೌಧುರಿ, ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಮಗ್ರಿಗಳನ್ನು ಬಳಸಿ, ಭಾರತೀಯ ಭೂಭಾಗಕ್ಕೆ ಅನುಗುಣವಾಗಿ ಡ್ರೋನ್‌ಗಳನ್ನು ರೂಪಿಸಿ, ಲಿಂಕ್ಡ್‌ಇನ್ ಮೂಲಕ ಭಾರತೀಯ ಸೇನೆಯ ಅಧಿಕಾರಿಗಳಿಗೆ ತಮ್ಮ ವಿನ್ಯಾಸಗಳನ್ನು ಪರಿಚಯಿಸಿದರು.

ಈಗ ಅವರು ನಿರ್ಮಿಸಿದ ಡ್ರೋನ್‌ಗಳನ್ನು ಜಮ್ಮು, ಹರಿಯಾಣದ ಚಂಡಿಮಂದಿರ್, ಪಶ್ಚಿಮ ಬಂಗಾಳದ ಪಾನಗಢ ಮತ್ತು ಅರುಣಾಚಲ ಪ್ರದೇಶದ ಸೇನಾ ಘಟಕಗಳಲ್ಲಿ ಯಶಸ್ವಿಯಾಗಿ ಬಳಸಲಾಗುತ್ತಿದೆ.

ತಂತ್ರಜ್ಞಾನ