ಭಾರತೀಯ ಸೇನೆಗೆ ಬಲ ನೀಡಲಿರುವ ಅಪಾಚಿ ಅಟಾಕ್ ಹೆಲಿಕಾಪ್ಟರ್‌ಗಳ ಮೊದಲ ಬ್ಯಾಚ್ ಇದೀಗ ಭಾರತಕ್ಕೆ ಆಗಮಿಸಿದ್ದು, ಹೆಲಿಕಾಪ್ಟರ್‌ಗಳನ್ನು ಜೋಧಪುರದಲ್ಲಿ ನಿಯೋಜಿಸಲಾಗುತ್ತದೆ. 2024ರ ಮಾರ್ಚ್‌ನಲ್ಲಿ ನೀಡಿದ ಆದೇಶದ ಹಿನ್ನೆಲೆಯಲ್ಲಿ 15 ತಿಂಗಳ ನಿರೀಕ್ಷೆಯ ಬಳಿಕ, ಈ ಹೆಲಿಕಾಪ್ಟರ್‌ಗಳು ಹಿಂದೋನ್ ಏರ್‌ಬೇಸ್‌ಗೆ ಬಂದು ಇಳಿದವು.



ಅಮೆರಿಕದ ಕಾರ್ಗೋ ವಿಮಾನದಿಂದ ಬಂದ ಈ ಮೂರು ಹೆಲಿಕಾಪ್ಟರ್‌ಗಳು ಡೆಸೆರ್ಟ್ ಕ್ಯಾಮೋಫ್ಲಾಜ್ ಬಣ್ಣದಲ್ಲಿ ಇದ್ದು, ಭಾರತೀಯ ಸೇನೆಯ ಯುದ್ಧ ಶಕ್ತಿಗೆ ದೊಡ್ಡ ಬಲವನ್ನೇ ನೀಡಿವೆ. ಈ ಹೆಲಿಕಾಪ್ಟರ್‌ಗಳ ಸೇರ್ಪಡೆ “ಮೈಲುಗಲ್ಲು ಕ್ಷಣ” ಎಂದು ಭಾರತೀಯ ಸೇನೆ ಸಾಮಾಜಿಕ ಜಾಲತಾಣದಲ್ಲಿ ಹರ್ಷ ವ್ಯಕ್ತಪಡಿಸಿದೆ.
ಸೈನಿಕರ ಕಾರ್ಯಚಟುವಟಿಕೆಗಳಿಗೆ ಸಹಾಯಕವಾಗಲಿರುವ ಈ ಆಧುನಿಕ ತಂತ್ರಜ್ಞಾನದ ಹೆಲಿಕಾಪ್ಟರ್‌ಗಳು, ಭಾರತೀಯ ಸೇನೆಯ ಕಾರ್ಯಾಚರಣಾ ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸಲಿದೆ ಎಂದು ಸೇನೆ ತಿಳಿಸಿದೆ.