ಭಾರತದ ಚೆಸ್ ಕ್ಷೇತ್ರದಲ್ಲಿ ಹೆಮ್ಮೆಪಡುವ ಕ್ಷಣ – 19 ವರ್ಷದ ಯುವ ಗ್ರ್ಯಾಂಡ್ ಮಾಸ್ಟರ್ ರಾಮೇಶ್ಬಾಬು ಪ್ರಗ್ನಾನಂದ ಮತ್ತೊಮ್ಮೆ ತನ್ನ ಪ್ರತಿಭೆಯ ಸಾಬೀತು ಮಾಡಿಸಿದ್ದಾನೆ. ಲಾಸ್ ವೇಗಾಸ್‌ನಲ್ಲಿ ನಡೆಯುತ್ತಿರುವ ಫ್ರೀಸ್ಟೈಲ್ ಚೆಸ್ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಯಲ್ಲಿ, ಪ್ರಗ್ನಾನಂದನು ವಿಶ್ವ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಮೂರು ದಿನಗಳಲ್ಲಿ ಎರಡನೇ ಬಾರಿಗೆ ಸೋಲಿಸಿ ವಿಶ್ವದ ಗಮನ ಸೆಳೆದಿದ್ದಾರೆ.

ಸೆಮಫೈನಲ್ ಹಂತದ ಮೊದಲ ಕ್ಲಾಸಿಫಿಕೇಶನ್ ಪಂದ್ಯದಲ್ಲಿ ಕೇವಲ 43 ಚಲನೆಯ ನಿಖರವಾದ ಆಟದಿಂದ ಕಾರ್ಲ್‌ಸನ್ ಅವರನ್ನು ಮಣಿಸಿದ್ದಾನೆ.
ಈ ಎರಡೂ ಜಯಗಳು ಕಾರ್ಲ್‌ಸನ್ ಅವರನ್ನು ಟೈಟಲ್ ಸ್ಪರ್ಧೆಯಿಂದ ದೂರಮಾಡಿದವು ಮಾತ್ರವಲ್ಲದೆ, ಪ್ರಗ್‌ಗ್ನಾನಂದನನ್ನು “ಲೆಜೆಂಡ್ ಸ್ಲೇಯರ್” ಎನಿಸಿಕೊಂಡಂತೆ ಮಾಡಿವೆ. ವಿಶ್ವದ ಪರಿಧಿಯಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸುತ್ತಿರುವ ಈ ಯುವ ಪ್ರತಿಭೆ, ಮುಂದಿನ ದಿನಗಳಲ್ಲಿ ಚೆಸ್ ಲೋಕದಲ್ಲಿ ಪ್ರಮುಖ ಪಾತ್ರವಹಿಸುವುದು ನಿಶ್ಚಿತ.