🌟 ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಅನುಶ್ರೀ ಮದುವೆ ಸುದ್ದಿ

🌟 ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಅನುಶ್ರೀ ಮದುವೆ ಸುದ್ದಿ

ಕನ್ನಡದ ಜನಪ್ರಿಯ ನಿರೂಪಕಿ ಹಾಗೂ ನಟಿ ಅನುಶ್ರೀ ಅವರ ಮದುವೆ ಬಗ್ಗೆ ಇದೀಗ ಮತ್ತೆ ಸುದ್ದಿ ಹರಿದಾಡುತ್ತಿದೆ. ಹಿಂದೆಯೂ ಅನೇಕ ಬಾರಿ ವದಂತಿಗಳು ಹರಿದಿದ್ದರೂ, ಈ ಬಾರಿ ವರದಿಗಳ ಪ್ರಕಾರ ಸುದ್ದಿ ನಿಜ ಎನ್ನಲಾಗಿದೆ. ಕುಟುಂಬ ಸದಸ್ಯರು ಆಯ್ಕೆ ಮಾಡಿದ ಯುವಕನೊಂದಿಗೆ ಅನುಶ್ರೀ ವಿವಾಹವಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಅನುಶ್ರೀ ಮದುವೆ ದಿನಾಂಕ ಆಗಸ್ಟ್ 28?
‘ವಿದ್ಯಾಪತಿ’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಅನುಶ್ರೀ ಈ ವರ್ಷವೇ ಮದುವೆ ಆಗುವ ಕುರಿತು ಸ್ವತಃ ಹೇಳಿದ್ದರು. ನಿಖರವಾದ ಮಾಹಿತಿ ಲಭ್ಯವಿಲ್ಲದಿದ್ದರೂ, ಆಗಸ್ಟ್ 28ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ ಎಂಬ ಊಹಾಪೋಹಗಳು ಜೋರಾಗಿದೆ.

ಭಾವಿ ವರನ ಹೆಸರು ರೋಷನ್ ಎನ್ನಲಾಗುತ್ತಿದ್ದು, ಅವರು ಮಂಗಳೂರು ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಮಿ ಎಂದು ಹೇಳಲಾಗುತ್ತಿದೆ. ಕೆಲ ವರದಿಗಳ ಪ್ರಕಾರ, ಮದುವೆ ದಿನಾಂಕ ಆಗಸ್ಟ್ 28ಕ್ಕೆ ನಿಗದಿಯಾಗಿದೆ. ಆದರೆ ಅಧಿಕೃತ ದೃಢೀಕರಣ ಮಾತ್ರ ಇನ್ನೂ ಬಾಕಿಯೇ ಇದೆ. ಕುಟುಂಬದವರು ಈಗಾಗಲೇ ಮದುವೆಗೆ ಸಿದ್ಧತೆ ಆರಂಭಿಸಿರುವುದಾಗಿ ವರದಿಯಾಗಿದೆ.

ಇತ್ತೀಚೆಗಷ್ಟೆ ನಡೆದ ಸಂದರ್ಶನವೊಂದರಲ್ಲಿ ಅನುಶ್ರೀ ಹೀಗೆ ಹೇಳಿದ್ದಾರೆ:
“ಹುಡುಗನು ನನ್ನ ಪರವಾಗಿ ಅಲ್ಲ, ತನ್ನ ಬದುಕಿನ ಬಗ್ಗೆ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನನ್ನು ಕಟ್ಟಿಹಾಕದೆ, ನನಗೆ ಬದುಕೋ ಅವಕಾಶ ಕೊಡಬೇಕು.”
ಈ ಮಾತುಗಳು ಅವರ ಭಾವನೆ ಮತ್ತು ಮದುವೆಯ ಬಗ್ಗೆ ಅವರ ದೃಷ್ಟಿಕೋಣವನ್ನು ಸ್ಪಷ್ಟವಾಗಿ ತೋರಿಸುತ್ತವೆ.

ಅಧಿಕೃತ ಘೋಷಣೆ ಇನ್ನೂ ಬಾಕಿ
ಈ ಕುರಿತು ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲದಿದ್ದರೂ, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಈ ಬಾರಿ ಅನುಶ್ರೀ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭಿಸಲು ತಯಾರಾಗುತ್ತಿದ್ದಾರೆ ಎಂಬ ನಿರೀಕ್ಷೆಯಿದೆ.

ಮನೋರಂಜನೆ ರಾಜ್ಯ