ಫ್ರೀಸ್ಟೈಲ್ ಚೆಸ್ ನಲ್ಲಿ ಪ್ರಗ್ನಾನಂದ ಮಿಂಚು – ವಿಶ್ವ ನಂ.1 ಕಾರ್ಲ್ಸನ್ ವಿರುದ್ಧ ಭರ್ಜರಿ ಜಯ

ಫ್ರೀಸ್ಟೈಲ್ ಚೆಸ್ ನಲ್ಲಿ ಪ್ರಗ್ನಾನಂದ ಮಿಂಚು – ವಿಶ್ವ ನಂ.1 ಕಾರ್ಲ್ಸನ್ ವಿರುದ್ಧ ಭರ್ಜರಿ ಜಯ

ಭಾರತದ ಚೆಸ್ ಸ್ಟಾರ್ ಪ್ರಗ್ನಾನಂದಾ ಲಾಸ್ ವೆಗಾಸ್‌ನಲ್ಲಿ ನಡೆಯುತ್ತಿರುವ ಫ್ರೀಸ್ಟೈಲ್ ಚೆಸ್ ಗ್ರ್ಯಾಂಡ್‌ಸ್ಲ್ಯಾಮ್‌ನಲ್ಲಿ ವಿಶ್ವ ನಂ.1 ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಅಚ್ಚರಿ ಜಯ ಗಳಿಸಿದ್ದಾರೆ. ಕೇವಲ 19 ವರ್ಷದ ಪ್ರಗ್ನಾನಂದಾ 39 ಚಲನೆಗಳಲ್ಲಿ ನಾರ್ವೇಜಿಯನ್ ಲೆಜೆಂಡ್ ಕಾರ್ಲ್ಸನ್ ಅವರನ್ನು ಸೋಲಿಸಿ ತಮ್ಮ ಕರಿಯರ್‌ನ ಮಹತ್ವದ ಸಾಧನೆ ದಾಖಲಿಸಿದ್ದಾರೆ.

“ಈಗ ನನಗೆ ಕ್ಲಾಸಿಕಲ್ ಚೆಸ್‌ಗಿಂತ ಫ್ರೀಸ್ಟೈಲ್ ಹೆಚ್ಚು ಇಷ್ಟ,” ಎಂದು ಪಂದ್ಯದ ನಂತರ ಪ್ರತಿಕ್ರಿಯಿಸಿದ ಪ್ರಗ್ನಾನಂದಾ ತಮ್ಮ ಧೈರ್ಯ ಮತ್ತು ಪರಿಪಕ್ವತೆಯನ್ನು ಮೆರೆದರು.

ಈ ಟೂರ್ನಮೆಂಟ್ ಕಾರ್ಲ್ಸನ್ ಅವರು ಸಹ-ಸಂಸ್ಥಾಪಕರಾಗಿರುವದರಿಂದ, ಅವರದೇ ಆದ ಫ್ರೀಸ್ಟೈಲ್ (Chess960) ಶೈಲಿಯಲ್ಲಿ ಪ್ರಗ್ನಾನಂದಾ ಜಯ ಸಾಧಿಸಿದದ್ದು ಹೆಚ್ಚು ಮಹತ್ವ ಪಡೆದಿದೆ.

ಅಂತರಾಷ್ಟ್ರೀಯ ಕ್ರೀಡೆ