ಬಾಲಿವುಡ್ ಜೋಡಿ ಸಿದ್ಧಾರ್ಥ್–ಕಿಯಾರಾಗೆ ಹೆಣ್ಣು ಮಗು ಜನನ

ಬಾಲಿವುಡ್ ಜೋಡಿ ಸಿದ್ಧಾರ್ಥ್–ಕಿಯಾರಾಗೆ ಹೆಣ್ಣು ಮಗು ಜನನ

ಬಾಲಿವುಡ್ ನ ತಾರಾ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾನಿ ದಂಪತಿಗೆ ಹೆಣ್ಣು ಮಗುವಿನ ಜನನವಾಗಿದೆ. ರಾಜಸ್ಥಾನದಲ್ಲಿ ಫೆಬ್ರವರಿ 2023ರಲ್ಲಿ ಮದುವೆಯಾದ ಈ ಜೋಡಿ, ಈ ವರ್ಷದ ಆರಂಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಗರ್ಭಧಾರಣೆಯ ಸುದ್ದಿಯನ್ನು ಬಹಿರಂಗಪಡಿಸಿದ್ದರು. ಕೈಯಲ್ಲಿ ಮಗುವಿನ ಸಾಕ್ಸ್ ಹಿಡಿದಿದ್ದ ಫೋಟೊ ಒಂದನ್ನು ಹಂಚಿಕೊಂಡು, “ನಮ್ಮ ಜೀವನದ ಅತಿದೊಡ್ಡ ವರದಾನ. ಶೀಘ್ರದಲ್ಲೇ ಬರುತ್ತಿದೆ,” ಎಂಬ ಶೀರ್ಷಿಕೆಯನ್ನು ಬಳಸಿದ್ದರು.

ಈ ಜೋಡಿಗೆ ‘ಶೇರ್‌ಷಾ’ ಚಿತ್ರದಲ್ಲಿ ಒಟ್ಟಾಗಿ ನಟಿಸುವ ಮೂಲಕ ಪರಿಚಯವಾಗಿದ್ದು, ಆ ಚಿತ್ರದಲ್ಲಿ ಸಿದ್ಧಾರ್ಥ್ ವಿಖ್ಯಾತ ಯೋಧ ವಿಕ್ರಂ ಬತ್ರಾ ಪಾತ್ರವನ್ನು ಮತ್ತು ಕಿಯಾರಾ ಅವರ ಪ್ರೇಯಸಿ ಡಿಂಪಲ್ ಚಿಮಾ ಪಾತ್ರವನ್ನು ನಿರ್ವಹಿಸಿದ್ದರು.

ವಿವಾಹದ ನಂತರವೂ ಈ ಜೋಡಿ ಬಾಲಿವುಡ್‌ನ ಅತ್ಯಂತ ಜನಪ್ರಿಯ ದಂಪತಿಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವೈಯಕ್ತಿಕ ಜೀವನದ ನೋಟಗಳನ್ನು ಹಂಚಿಕೊಳ್ಳುತ್ತಾ ಬರುತ್ತಿದ್ದರು. ಇದೀಗ ಅವರು ಹೆಣ್ಮಗುವಿನ ಪೋಷಕರಾದ ಸುದ್ದಿಗೆ ಅಭಿಮಾನಿಗಳು, ಸಹ ನಟರು ಮತ್ತು ಸಿನಿ ತಾರಾ ಬಳಗದವರು ಶುಭಾಶಯ ಕೊರುತ್ತಿದ್ದಾರೆ.

ಮನೋರಂಜನೆ