ಶುಭಾಂಶು ಶುಕ್ಲಾ ಜುಲೈ 14ರಂದು ಮರಳಿ ಭೂಮಿಗೆ

ಶುಭಾಂಶು ಶುಕ್ಲಾ ಜುಲೈ 14ರಂದು ಮರಳಿ ಭೂಮಿಗೆ

ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್‌ನಲ್ಲಿರುವ ಭಾರತೀಯ ಅಂತರಿಕ್ಷಯಾತ್ರಿಕ ಶುಭಾಂಶು ಶುಕ್ಲಾ ಜುಲೈ 14ರಂದು ಭೂಮಿಗೆ ಮರಳಲಿದ್ದಾರೆ ಎಂದು ಆಕ್ಸಿಯಮ್ ಸ್ಪೇಸ್ ಘೋಷಿಸಿದೆ.

ಶುಕ್ಲಾ ಸೇರಿದಂತೆ ಪೆಗೀ ವಿಟ್ಸನ್, ಸ್ಲಾವೊಸ್ ಉಜ್ನಾನ್ಸ್ಕಿ ಮತ್ತು ಟಿಬೋರ್ ಕಾಪು ಇವರುಗಳ ನಾಲ್ಕು ಜನರ ತಂಡ, ಸ್ಪೇಸ್‌ಎಕ್ಸ್ ಡ್ರ್ಯಾಗನ್ ಯಾನದಲ್ಲಿ ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್‌ನ ಹಾರ್ಮನಿ ಮೋಡ್ಯೂಲ್‌ನ ಮೇಲೆಮುಖದ ಪೋರ್ಟ್‌ನಿಂದ ಜುಲೈ 14ರಂದು ಸಂಜೆ 4:35ಕ್ಕೆ (ಭಾರತೀಯ ಕಾಲಮಾನ) ಹೊರಡಲಿದ್ದಾರೆ.

ಅಂತರಿಕ್ಷ ಕೇಂದ್ರದಲ್ಲಿ ಅವರು ಏಳು ಭಾರತೀಯ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದ್ದು, ಅವುಗಳಲ್ಲಿ ತೂಕರಹಿತ ಪರಿಸ್ಥಿತಿಯಲ್ಲಿ ಮಸಲ್ ಲಾಸ್, ಮೆದುಳು-ಕಂಪ್ಯೂಟರ್ ಇಂಟರ್ಫೇಸ್ ಅಭಿವೃದ್ಧಿ ಮತ್ತು ಹೆಸರು ಕಾಳು ಹಾಗೂ ಮೆಂತೆ ಬೀಜಗಳ ಮೊಳೆಯುವಿಕೆ ಮೊದಲಾದವುಗಳಿವೆ.

ಶುಕ್ಲಾ ಅವರು ಕೇರಳ ಮತ್ತು ಲಕ್ನೋ ಭಾಗದ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ, ಅಂತರಿಕ್ಷದ ಜೀವನ ಶೈಲಿ, ಆಹಾರ, ನಿದ್ರೆ ಮತ್ತು ಆರೋಗ್ಯ ಕುರಿತು ಕುತೂಹಲಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಅಂತರಾಷ್ಟ್ರೀಯ ತಂತ್ರಜ್ಞಾನ ರಾಷ್ಟ್ರೀಯ